ಮಡಿಕೇರಿ, ಏ. 19: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾ ನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದ ಅಶೋಕ್ ಹಾಗೂ ಮತ್ತೋರ್ವನನ್ನು ಇಲ್ಲಿನ ವಿಕಾಸ ಜನಸೇವಾ ಸಂಸ್ಥೆ ಪ್ರಮುಖರು ಬೆಂಗಳೂರಿನ ಆರ್.ವಿ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಅಸ್ವಸ್ಥರ ಬಗ್ಗೆ ಸಂಸ್ಥೆಯ ಅಧ್ಯಕ್ಷ ರಮೇಶ್ ಬಳಿ ಸಾರ್ವಜನಿಕರು ಗಮನ ಸೆಳೆಯುವದರೊಂದಿಗೆ, ಪೊಲೀಸರು ಮತ್ತು ಇತರರ ನೆರವಿನಿಂದ ‘ಆಂಬ್ಯುಲೆನ್ಸ್’ ವಾಹನದಲ್ಲಿ ರಾಜಧಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.