ಮಡಿಕೇರಿ, ಏ. 19: ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಹತ್ಯೆಗೈದಿರು ವದನ್ನು ಖಂಡಿಸಿರುವ ಕೊಡಗು ಜಿಲ್ಲಾ ಸುನ್ನಿ ಯುವಜನ ಸಂಘದ (ಎಸ್ವೈಎಸ್) ಪ್ರಮುಖರು, ಈ ರೀತಿಯ ದುಷ್ಕøತ್ಯಗಳಿಗೆ ಕಾರಣರಾದ ವರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ವೈಎಸ್ ರಾಜ್ಯ ಸಮಿತಿಯ ಸದಸ್ಯ ಎಂ.ಬಿ. ಹಮೀದ್ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಅನಿವಾರ್ಯತೆ ಎದುರಾಗಿದೆ. ದೇಶದಲ್ಲಿ ಇದಕ್ಕೂ ಮುನ್ನ ಹಲವಾರು ಅತ್ಯಚಾರ, ಕೊಲೆ ಪ್ರಕರಣಗಳು ನಡೆದಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದರೂ ಕೂಡ ಇತರರಿಗೆ ಆ ಶಿಕ್ಷೆಯ ಭಯ ಬಾರದಿರುವದೇ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ವೈಎಸ್ನ ಜಿಲ್ಲಾ ಉಪಾಧ್ಯಕ್ಷರಾದ ಸಿ.ಎಂ. ಹಂಸ ನೆಲ್ಯಹುದಿಕೇರಿ, ಸದಸ್ಯರುಗಳಾದ ಪಿ.ಎ. ಅಬ್ದುಲ್ಲ ನೆಲ್ಯಹುದಿಕೇರಿ, ಹುಸೈನ್ ಕುಶಾಲನಗರ, ಅಬೂಬಕ್ಕರ್ ಕಡಂಗ ಉಪಸ್ಥಿತರಿದ್ದರು.