ನಾಪೆÇೀಕ್ಲು, ಏ. 19: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ನಾಲ್ಕನೇ ದಿನದ ಪಂದ್ಯಾಟದಲ್ಲಿ 11 ತಂಡಗಳು ಮುನ್ನಡೆ ಸಾಧಿಸಿವೆ.

ಗುರುವಾರ ನಡೆದ ಪಂದ್ಯಾಟದಲ್ಲಿ ಬಲ್ಲಂಡ, ಕೊಟ್ಟಂಗಡ, ಕಲ್ಮಾಡಂಡ, ಮಾಳೆಯಂಡ, ಕಂಗಾಂಡ, ಮಾಳೇಟಿರ, ಕಲ್ಯಾಟಂಡ, ಕಡೇಮಾಡ, ಪುಟ್ಟಿಚಂಡ, ಕಾಯಪಂಡ, ಅಚ್ಚಾಂಡಿರ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಬಲ್ಲಂಡ ಮತ್ತು ಚಾರಿಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲ್ಲಂಡ ತಂಡವು ಚಾರಿಮಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ಬಲ್ಲಂಡ ತಂಡದ ಪರ ಕಿರಣ್ ಕುಶಾಲಪ್ಪ ಒಂದು ಗೋಲು ದಾಖಲಿಸಿದರು. ಮತ್ರಂಡ ಮತ್ತು ಕೊಟ್ಟಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಟ್ಟಂಗಡ ತಂಡವು ಮತ್ರಂಡ ತಂಡವನ್ನು ಟೈ ಬ್ರೇಕರ್‍ನಲ್ಲಿ 6-4 ಗೋಲಿನಿಂದ ಸೋಲಿಸಿತು. ಪಾಲೆಯಡ ಮತ್ತು ಕಲ್ಮಾಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲ್ಮಾಡಂಡ ತಂಡವು ಪಾಲೆಯಡ ತಂಡವನ್ನು 4-1 ಗೋಲಿನ ಅಂತರದಿಂದ ಮಣಿಸಿತು. ಕಲ್ಮಾಡಂಡ ತಂಡದ ಪರ ತರುಣ್ ತಿಮ್ಮಯ್ಯ, ಚಮನ್, ಸೋಮಣ್ಣ, ಕವನ್ ತಲಾ ಒಂದೊಂದು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಕಾಳೆಯಂಡ ತಂಡದ ವಾಕ್ ಓವರ್‍ನಿಂದ ಮಾಳೆಯಂಡ ತಂಡವು ಮುನ್ನಡೆ ಸಾಧಿಸಿತು. ಅಜ್ಜಿಕುಟ್ಟಿರ ಮತ್ತು ಕಂಗಾಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಗಾಂಡ ತಂಡವು ಅಜ್ಜಿಕುಟ್ಟಿರ ತಂಡವನ್ನು 5-0 ಗೋಲಿನ ಅಂತರದಿಂದ ಮಣಿಸಿತು. ಕಂಗಾಂಡ ತಂಡದ ಪರ ಪುನೀತ್ ಮುತ್ತಪ್ಪ ಎರಡು, ಕವನ್ ಕಾಳಪ್ಪ, ಮಿಥುನ್ ಮುದ್ದಯ್ಯ, ಅಜನ್ ಅಪ್ಪಚ್ಚು ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಕೈಬುಲಿರ ಮತ್ತು ಮಾಳೇಟಿರ ತಂಡದ ನಡುವಿನ ಪಂದ್ಯದಲ್ಲಿ ಮಾಳೇಟಿರ ತಂಡವು ಕೈಬುಲಿರ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿತು. ಕಲ್ಯಾಟಂಡ ಮತ್ತು ಅಪ್ಪಂಡೇರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲ್ಯಾಟಂಡ ತಂಡವು ಅಪ್ಪಂಡೇರಂಡ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿತು. ಕಲ್ಯಾಟಂಡ ತಂಡದ ಪರ ಧನುಶ್ ಬೋಪಣ್ಣ ಎರಡು, ಕರಣ್ ಕುಟ್ಟಣ್ಣ, ತಿಮ್ಮಯ್ಯ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಕಡೇಮಾಡ ಮತ್ತು ಮಲ್ಲಜ್ಜಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಡೇಮಾಡ ತಂಡವು ಮಲ್ಲಜ್ಜಿರ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿತು. ಕಡೇಮಾಡ ತಂಡದ ಪರ ಸುಚನ್ ಸುಬ್ಬಯ್ಯ, ಕಾವೇರಪ್ಪ, ಪವನ್, ಹರೀಶ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಪುಟ್ಟಿಚಂಡ ಮತ್ತು ಕಾವಾಡಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಟ್ಟಿಚಂಡ ತಂಡವು ಕಾವಾಡಿಚಂಡ ತಂಡವನ್ನು 3-1 ಗೋಲಿನಿಂದ ಮಣಿಸಿತು. ಪುಟ್ಟಿಚಂಡ ತಂಡದ ಪರ ಮಧು ಮಾದಪ್ಪ ಎರಡು ಹಾಗೂ ಬಿಪಿನ್ ಒಂದು ಗೋಲು ದಾಖಲಿಸಿದರು.

ಮೇಕತಂಡ ಮತ್ತು ಕಾಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಯಪಂಡ ತಂಡವು ಮೇಕತಂಡ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ಕಾಯಪಂಡ ತಂಡದ ಪರ ದಿನು ವಿಜಯ ಮೂರು ಗೋಲು ಹಾಗೂ ಮೋಹನ್ ಒಂದು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅಚ್ಚಾಂಡಿರ ಮತ್ತು ಚಟ್ಟಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಚ್ಚಾಂಡಿರ ತಂಡವು ಚಟ್ಟಂಡ ತಂಡವನ್ನು 3-0 ಗೋಲಿನ ಅಂತರದಿಂದ ಸೋಲಿಸಿತು. ಅಚ್ಚಾಂಡಿರ ತಂಡದ ಪರ ಮಧು ಮೋಹನ್ ಮಂದಣ್ಣ, ಅಜಯ್ ನಾಣಯ್ಯ, ಅನಿಶ್ ಅಪ್ಪಚ್ಚು ತಲಾ ಒಂದೊಂದು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.