ಮಡಿಕೇರಿ, ಏ. 19: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ಮಧ್ಯೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಕೂಡಕಂಡಿ ತಂಡವು ಮೂರನೇ ತಂಡವಾಗಿ ಪ್ರಿ ಕ್ವಾರ್ಟರ್ಗೆ ಪ್ರವೇಶಿಸಿದೆ. ಈಗಾಗಲೇ ಕುದುಪಜೆ ಹಾಗೂ ಪೊನ್ನಚನ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಆತಿಥೇಯ ಚೆರಿಯಮನೆ ಎ ತಂಡ ಒಂದು ವಿಕೆಟ್ಗೆ 70 ರನ್ ಗಳಿಸಿದರೆ, ದಂಡಿನ ತಂಡ 5 ವಿಕೆಟ್ಗೆ 64 ರನ್ ಗಳಿಸಿ ಸೋಲನುಭವಿಸಿತು. ದೇವಜನ ತಂಡ 7 ವಿಕೆಟ್ಗೆ 55 ರನ್ ಗಳಿಸಿದರೆ, ಕುದುಕುಳಿ ಎ ತಂಡ 5 ವಿಕೆಟ್ಗೆ 45 ರನ್ ಗಳಿಸಿ 10 ರನ್ಗಳ ಅಂತರದಿಂದ ಸೋಲನುಭವಿಸಿತು.
ಉಗ್ರಾಣಿ ತಂಡ 7 ವಿಕೆಟ್ಗೆ 50 ರನ್ ಗಳಿಸಿದರೆ, ಕೂಡಕಂಡಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು.
ಸೆಟ್ಟೆಜನ ತಂಡವು 5 ವಿಕೆಟ್ಗೆ 82 ರನ್ ಗಳಿಸಿದರೆ, ಕುಂಬಗೌಡನ ತಂಡವು 8 ವಿಕೆಟ್ ಕಳೆದುಕೊಂಡು 36 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಮತ್ತೊಂದು ಪಂದ್ಯದಲ್ಲಿ ಚೆರಿಯಮನೆ ಎ ತಂಡ 5 ವಿಕೆಟ್ಗೆ 72 ರನ್ ಗಳಿಸಿದರೆ, ಪಡ್ಪುಮನೆ ತಂಡ 5 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿ 7 ರನ್ಗಳ ಅಂತರದಿಂದ ಸೋಲನುಭವಿಸಿತು.
ನಿಡ್ಯಮಲೆ ಬಿ ತಂಡ 7 ವಿಕೆಟ್ಗೆ 79 ರನ್ ಗಳಿಸಿದರೆ, ಚೆಟ್ಟಿಮಾಡ ತಂಡ 4 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿ 15 ರನ್ಗಳ ಅಂತರದಿಂದ ಸೋಲನುಭವಿಸಿತು. ತಳೂರು ಬಿ ತಂಡ 5 ವಿಕೆಟ್ಗೆ 58 ರನ್ ಗಳಿಸಿದರೆ ದೇವಜನ ತಂಡ ಮೂರು ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಕೊಡಗನ ತಂಡ 5 ವಿಕೆಟ್ಗೆ 58 ರನ್ ಗಳಿಸಿದರೆ, ಕೇನೇರ ತಂಡ 4 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಬಳಪದ ತಂಡ 6 ವಿಕೆಟ್ಗೆ 65 ರನ್ ಗಳಿಸಿದರೆ, ಕಾವೇರಿಮನೆ ತಂಡ 6 ವಿಕೆಟ್ಗೆ 45 ರನ್ ಮಾತ್ರ ಗಳಿಸಿ 20 ರನ್ಗಳ ಅಂತರದಿಂದ ಸೋಲನುಭವಿಸಿತು. ಚೆರಿಯಮನೆ ಎ ತಂಡ 8 ವಿಕೆಟ್ಗೆ 65 ರನ್ ಗಳಿಸಿದರೆ, ಕೂಡಕಂಡಿ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ ಪ್ರಿಕ್ವಾರ್ಟರ್ಗೇರಿತು. ದೇವಜನ ತಂಡ 5 ವಿಕೆಟ್ಗೆ 56 ರನ್ ಗಳಿಸಿದರೆ, ಸೆಟ್ಟೆಜನ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸೇರಿತು.