ನಾಪೋಕ್ಲು, ಏ. 19: ಇಲ್ಲಿಗೆ ಸಮೀಪದ ಹಳೆ ತಾಲೂಕಿನಲ್ಲಿ ಮುಖ್ಯ ರಸ್ತೆಯನ್ನು ಅಗೆದು ಹಾಳುಗೆಡವಲಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಮುಖ್ಯ ರಸ್ತೆಯಲ್ಲಿ ಹೊಂಡ ಮಾಡಿ ಕಾಫಿ ತೋಟಗಳಿಗೆ ನೀರು ಹಾಯಿಸಲು ಪೈಪ್ ಅಳವಡಿಸುವ ಉದ್ದೇಶದಿಂದ ರಸ್ತೆಯಲ್ಲಿ ಗುಂಡಿ ಮಾಡಲಾಗಿತ್ತು.
ರಸ್ತೆ ಅಗೆದು ಹೊಂಡ ಮಾಡಿರುವದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಇತ್ತೀಚೆಗೆ ದ್ವಿಚಕ್ರ ವಾಹನ ಸವಾರನೊಬ್ಬ ಅಪÀಘಾತಕ್ಕೆ ಒಳಗಾಗಿದ್ದಾನೆ. ರಸ್ತೆ ಗುಂಡಿ ಮಾಡಲು ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದ್ದರೂ ಈಗ ಮುಚ್ಚಲು ವಿಳಂಬ ಮಾಡುತ್ತಿದೆ. ಸಂಬಂಧಿಸಿದ ಇಲಾಖೆ ಅಥವಾ ತೋಟದ ಮಾಲೀಕರು ರಸ್ತೆ ಗುಂಡಿ ಮುಚ್ಚಲು ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರಾದ ಎಂ.ಪಿ. ಮೊಯಿದು, ಕೊಂಬನ ವಿಠಲ ಮತ್ತಿತರರು ಆಗ್ರಹಿಸಿದ್ದಾರೆ.