ವೀರಾಜಪೇಟೆ, ಏ. 19: ವೀರಾಜಪೇಟೆಯ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ಸವಿತಾ ಸಮಾಜ ಕ್ರೀಡಾ ಮತ್ತು ಸಾಂಸ್ಕ್ರತಿಕ ಸಮಿತಿಯ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಕೈಕೇರಿ ತಂಡ ಪ್ರಶಸ್ತಿ ಪಡೆದುಕೊಂಡಿತು. ಕೈಕೇರಿ ಸವಿತಾ ಸಮಾಜ ಮತ್ತು ಶನಿವಾರಸಂತೆ ತಂಡಗಳ ನಡುವೆ ಫೈನಲ್ ಪಂದ್ಯಾಟ ದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೈಕೇರಿ ತಂಡ 25 ರನ್‍ಗಳ ಅಂತರದಿಂದ ಜಯಗಳಿಸಿತು.

ಮೊದಲು ನಡೆದ ಮೊದಲ ಸೆಮಿ ಫೈನಲ್ ಪಂದ್ಯಾಟದಲ್ಲಿ ಕೈಕೇರಿ ತಂಡವು ವೀರಾಜಪೇಟೆಯ ಚಾಲೆಂಜರ್ಸ್ ತಂಡವನ್ನು 85 ರನ್‍ಗಳ ಅಂತರದಿಂದ ಸೋಲಿಸಿತ್ತು.

ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕೈಕೇರಿಯ ಪೊನ್ನಣ್ಣ,. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೈಕೇರಿಯ ರೋಶನ್ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಶನಿವಾರಸಂತೆಯ ಅಪ್ಪು ಹಾಗೂ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಈಚೂರಿನ ಸಂಕೇತ್ ಪಡೆದುಕೊಂಡರು.

ಇದಕ್ಕೂ ಮೊದಲು ನಡೆದ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಕೈಕೇರಿಯ ಸವಿತಾ ಸಮಾಜ ಪ್ರಥಮ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಮಡಿಕೇರಿಯ ಯಜ್ಞ ಪ್ರಥಮ ಬಹುಮಾನ ಪಡೆದುಕೊಂಡಿವೆ.

ಸನ್ಮಾನ: ಕೈಕೇರಿ ಸವಿತಾ ಸಮಾಜದ ಅಧ್ಯಕ್ಷ ವಿ.ಬಿ. ಕಿರಣ್, ಕೆಇಬಿ ನಿವೃತ್ತ ನೌಕರ ಬಿ.ಪಿ. ಸುಂದರ, ನಿವೃತ್ತ ಸರ್ಕಾರಿ ನೌಕರ ಕೃಷ್ಣರಾಜು, ಮಾಜಿ ಯೋಧ ಗೋಣಿಕೊಪ್ಪಲಿನ ಬಿದ್ದಪ್ಪ, ಇರ್ಪುವಿನ ಜಗನ್ನಾಥ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಂದ್ಯಾಟದ ವಿನ್ನರ್ಸ್ ಟ್ರೋಫಿಯನ್ನು ಕಗ್ಗೋಡ್ಲುವಿನ ಹೊನ್ನದ ರಾಕೇಶ್ ಕಗ್ಲೆ ಹಾಗೂ ರನ್ನರ್ಸ್ ಟ್ರೋಫಿಯನ್ನು ಮೂಕೊಂಡ ಶಶಿ ಸುಬ್ರಮಣಿ ವಿತರಿಸಿದರು. ವೇದಿಕೆಯಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಎನ್ ವೆಂಕಟೇಶ್ ಹಾಗೂ ವಿರಾಜಪೇಟೆ ಸವಿತಾ ಸಮಾಜದ ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್ ವಕೀಲ ವಿ.ಜಿ. ರಾಕೇಶ್, ಸಮಾಜದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.