ಸೋಮವಾರಪೇಟೆ,ಏ.20: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ, ಬಂಧಿಸಲಾಗಿದ್ದ ಈರ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಲ್ಕಂದೂರು ಗ್ರಾಮದ ಕೆ.ಟಿ. ಸುರೇಶ್ ಎಂಬವರಿಗೆ ಸೇರಿದ ಕ್ಯಾಂಟರ್ ವಾಹನದಲ್ಲಿ &divound;ನ್ನೆ ಬೆಳಗ್ಗಿನ ಜಾವ 3.30ರ ಸಮಯದಲ್ಲಿ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದ್ದ ಬಗ್ಗೆ ದೊರೆತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಡಿವೈಎಸ್ಪಿ ಶ್ರೀ&divound;ವಾಸಮೂರ್ತಿ ನೇತೃತ್ವದ ತಂಡ, ವಾಹನವನ್ನು ವಶಕ್ಕೆ ಪಡೆದಿದೆ.
ಇದರೊಂದಿಗೆ ವಾಹನದ ಮಾಲೀಕ ಸುರೇಶ್ ಮತ್ತು ಕ್ಲೀನರ್ ಕಾರ್ತಿಕ್ನನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ರಮೇಶ್ ಪರಾರಿಯಾಗಿದ್ದಾನೆ. ಬಂಧಿಸಲ್ಪಟ್ಟ ಈರ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಕಲೇಶಪುರ ತಾಲೂಕಿನ ಯಸಳೂರು, ಗೊದ್ದು, ಕೂತಿ ಮಾರ್ಗವಾಗಿ ಸೋಮವಾರಪೇಟೆ ಮೂಲಕ ಮಧ್ಯರಾತ್ರಿ ಅಕ್ರಮ ಮರಳು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಡಿವೈಎಸ್ಪಿ ನೇತೃತ್ವದ ತಂಡ ಧಾಳಿ ನಡೆಸಿ ವಾಹನ ಸಹಿತ ಆರೋಪಿಗಳನ್ನು ಬಂಧಿಸಿದ್ದು, ಕ್ಯಾಂಟರ್ ಮಾಲೀಕ ಸುರೇಶ್ಗೆ ಸೇರಿದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದುಕೊಂಡಿದೆ. ವಾಹನದ ದಾಖಲಾತಿಗಳ ಗೊಂದಲದಿಂದ ಕ್ಯಾಂಟರ್ ಮಾಲೀಕನ ಹೆಸರು ಕಲ್ಕಂದೂರಿನ ನಾಗೇಶ್ ಎಂದು ತಪ್ಪಾಗಿ ತಿಳಿಯಲಾಗಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.