ಗೋಣಿಕೊಪ್ಪಲು, ಏ. 20: ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ತಾ. 21ರಂದು (ಇಂದು) ನಾಮ ಪತ್ರ ಸಲ್ಲಿಸಲಿದ್ದಾರೆ. ವೀರಾಜಪೇಟೆಯ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದು, ಕ್ಷೇತ್ರದಲ್ಲಿ ಆನೆ ಹಾವಳಿ, ಹುಲಿ ಹಾವಳಿ, ಬೆಳೆದ ಬೆಳೆಗೆ ಉತ್ತಮ ಬೆಲೆ ಇಲ್ಲದೇ ಸಂಕಷ್ಟದಲ್ಲಿ ರೈತನೋವಿಂದ ಇರುವದರಿಂದ ಆಡಂಭರವಿಲ್ಲದೆ ಸರಳವಾಗಿ ನಾಮಪತ್ರ ಸಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆನೆ ಹಾವಳಿಯಿಂದ ನೊಂದ ಕುಟುಂಬ, ಸಾಲಭಾದೆಯಿಂದ ಮೃತಪಟ್ಟ ಕುಟುಂಬ, ನೊಂದ ಕಾಫಿ ಬೆಳೆಗಾರರ ಸಮಕ್ಷಮ ಸರಳ ರೀತಿಯಲ್ಲಿ ಸಂಕೇತ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.