ನಾಪೆÇೀಕ್ಲು, ಏ. 20: ಕೊಡವ ಐರಿ ಸಮಾಜದ ವತಿಯಿಂದ ನಡೆಸುತ್ತಿರುವ ಏಳನೇ ವರ್ಷದ ಐಮಂಡ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಸ್ಥಳೀಯ ಮೂರ್ನಾಡಿನ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪಂದ್ಯಾಟಕ್ಕೆ ಗಣ್ಯರು ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಐಮಂಡ ಭಾಸ್ಕರ್ ಮಾತನಾಡಿ ಜಿಲ್ಲೆಯಲ್ಲಿ ಸುಮಾರು 20 ಜನಾಂಗದವರು ಕೊಡವ ಭಾಷಿಕರಿದ್ದು, ಅದರಲ್ಲಿ ನಮ್ಮ ಜನಾಂಗವು ಒಂದಾಗಿದೆ. ಯಾವದೇ ಒಂದು ಜನಾಂಗ ಉದ್ಧಾರವಾಗಬೇಕಾದರೆ, ಆಯಾಯ ಕಟ್ಟುಪಾಡುಗಳನ್ನು ಅವರು ಅನುಸರಿಸಿಕೊಂಡು ಬರಬೇಕಾಗಿದೆ. ಅದರಂತೆ ತಮ್ಮ ಜನಾಂಗದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ತಮ್ಮ ಜನಾಂಗದವರನ್ನೆ ಆಶ್ರಯಿಸುವ ಮೂಲಕ ಜನಾಂಗದ ಜನ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗಬೇಕೆಂದರು.ಕೊಡವ ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಜನಾಂಗ ಒಗ್ಗಟ್ಟಾಗಿದ್ದರೆ ಮಾತ್ರ ಯಶಸ್ಸು ಸಾಧ್ಯ. ಆ ನಿಟ್ಟಿನಲ್ಲಿ ಜನಾಂಗದವರು ಹೆಗಲಿಗೆ ಹೆಗಲುಕೊಟ್ಟು ನಿಂತರೆ ಮಾತ್ರ ಜನಾಂಗ ಉಳಿಯಲು

(ಮೊದಲ ಪುಟದಿಂದ) ಸಾಧ್ಯ ಎಂದರು. ಮುಖ್ಯವಾಗಿ ನಾನು ಯಾವ ಜಾತಿ ಎಂದು ಹೇಳಲು ಹಿಂಜರಿಕೆ ಬೇಡ ಜಾತಿಯನ್ನು ಗುರುತಿಸಿಕೊಂಡರೆ ಮಾತ್ರ ಜನಾಂಗ ಉದ್ಧಾರವಾಗಲು ಸಾಧ್ಯ ಎಂದರು.

ಸಭೆಯಲ್ಲಿ ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಮೈದಾನದ ಸುತ್ತ ಭವ್ಯ ಮೆರವಣಿಗೆಯನ್ನು ದುಡಿಕೊಟ್ಟ್ ಪಾಟ್‍ನೊಂದಿಗೆ ನಡೆಸಲಾಯಿತು. ನಂತರ ಪಂದ್ಯಾಟದ ಉದ್ಘಾಟನೆ ನಡೆಸಲಾಯಿತು. ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಉದ್ಘಾಟನಾ ಪಂದ್ಯಾಟವು ತಟ್ಟಂಡ ಬೊಮ್ಮಂಜಿ ಮತ್ತು ಬೆಪ್ಪುನಾಡ್ ತಂಡಗಳ ನಡುವೆ ನಡೆದು ಬೆಪ್ಪುನಾಡ್ ತಂಡವು ಜಯ ಸಾಧಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಮಂಡ ಅಪ್ಪಣ್ಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಟ್ಟಂಡ ಸತೀಶ್, ಐರಿರ ಬಾಬೂ ಪೂಣಚ್ಚ, ಅಮ್ಮಣಂಡ ಪೂಣಚ್ಚ, ಐಮಂಡ ರೂಪೇಶ್ ನಾಣಯ್ಯ, ಐಮಂಡ ಸುಧಾ ಪೊನ್ನಪ್ಪ, ಗೋಪಾಲ್ ಸೋಮಯ್ಯ, ಐಮಂಡ ಕಾರ್ಯಪ್ಪ ಐಮಂಡ ಕುಶ ಹಾಜರಿದ್ದರು.