ಮಡಿಕೇರಿ, ಏ. 20: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಇಲ್ಲಿನ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ನಾಲ್ಕನೇ ತಂಡವಾಗಿ ಸೆಟ್ಟೆಜನ ತಂಡ ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಆನೇರ ತಂಡ 7 ವಿಕೆಟ್‍ಗೆ 20 ರನ್ ಗಳಿಸಿದರೆ, ಬೊಳ್ಳುಮಾನಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ, 2 ಓವರ್‍ನಲ್ಲಿ ಗುರಿ ತಲಪಿತು. ಹುಲಿಮನೆ ತಂಡ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 47 ರನ್ ಗಳಿಸಿದರೆ, ಕುಡೆಕಲ್ಲು ಬಿ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಚೆರಿಯಮನೆ ತಂಡ 3 ವಿಕೆಟ್‍ಗೆ 82 ರನ್ ಗಳಿಸಿದರೆ, ಕುಂಬನ ತಂಡ 8 ವಿಕೆಟ್‍ಗೆ 65 ರನ್ ಮಾತ್ರ ಗಳಿಸಿ 17 ರನ್‍ಗಳ ಅಂತರದಿಂದ ಸೋಲನು ಭವಿಸಿತು.
ಕಡ್ಲೇರ ಎ ತಂಡ 9 ವಿಕೆಟ್‍ಗೆ 20 ರನ್ ಗಳಿಸಿದರೆ, ಕೋಟೇರ ತಂಡ 1 ವಿಕೆಟ್ ಕಳೆದುಕೊಂಡು ಗುರಿ ತಲಪಿತು. ಮೇರ್ಕಜೆ ತಂಡ 5 ವಿಕೆಟ್‍ಗೆ 32 ರನ್ ಗಳಿಸಿದರೆ, ಬೈಮನ ಬಿ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಬೊಳ್ಳುಮಾನಿ ತಂಡ 5 ವಿಕೆಟ್‍ಗೆ 74 ರನ್ ಗಳಿಸಿದರೆ, ನಿಡಿಂಜಿ ತಂಡ 6 ವಿಕೆಟ್‍ಗೆ 46 ರನ್ ಮಾತ್ರ ಗಳಿಸಿ 28 ರನ್‍ಗಳ ಅಂತರದಿಂದ ಸೋಲನುಭವಿಸಿತು.
ಎಡಿಕೇರಿ ಬಿ ತಂಡ 4 ವಿಕೆಟ್‍ಗೆ ಭರ್ಜರಿ 110 ರನ್ ಪೇರಿಸಿದರೆ, ಉತ್ತರವಾಗಿ ಆಡಿದ ನಿರ್ವಾಣಿ ತಂಡ 7 ವಿಕೆಟ್‍ಗೆ 25 ರನ್ ಮಾತ್ರ ಗಳಿಸಿ 85 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಎಡಿಕೇರಿ ತಂಡದ ಪರ ಲಿತು ಔಟಾಗದೆ 45 ರನ್ ಗಳಿಸಿ ಗಮನ ಸೆಳೆದರು. ಪಾಂಡಿಮನೆ ಎ ತಂಡ 3 ವಿಕೆಟ್‍ಗೆ 89 ರನ್ ಗಳಿಸಿದರೆ, ಉತ್ತರವಾಗಿ ಆಡಿದ ನೂಜಿಬೈಲು ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಕುಡೆಕಲ್ಲು ಬಿ ತಂಡ 7 ವಿಕೆಟ್‍ಗೆ 32 ರನ್ ಗಳಿಸಿದರೆ, ಸೆಟ್ಟೆಜನ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು.
ಕೋಟೇರ ತಂಡ 5 ವಿಕೆಟ್‍ಗೆ 72 ರನ್ ಗಳಿಸಿದರೆ, ಪಾಲಾರ್ ತಂಡ 2 ವಿಕೆಟ್ ನಷ್ಟದಲ್ಲಿ 76 ರನ್ ಗಳಿಸಿ ಗೆಲುವು ಸಾಧಿಸಿತು. ಬೈಮನ ಬಿ ತಂಡ 7 ವಿಕೆಟ್‍ಗೆ 80 ರನ್ ಗಳಿಸಿದರೆ, ಕೋಡಿಮನೆ ತಂಡ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 34 ರನ್ ಮಾತ್ರ ಗಳಿಸಿ 46 ರನ್‍ಗಳ ಅಂತರದಿಂದ ಸೋಲನುಭವಿಸಿತು.
ಇಂದಿನ ಪಂದ್ಯಾಟಗಳು
ಮೈದಾನ - 1
ಬೆ. 9 ಗಂಟೆಗೆ ಕೇನೇರ v/s ಮುಕ್ಕಾಟಿ
10 ಬಳಪದ v/s ನಿಡ್ಯಮಲೆ
11 ಬೈಮನ v/s ಪಾಲಾರ್
ಮಧ್ಯಾಹ್ನ 1 ಗಂಟೆಗೆ ಮುಕ್ಕಾಟಿ (ಕೈಕೇರಿ) v/s ಪಾರೆಪಾಡಿ
ಹಾಗೂ ದ್ವಿತೀಯ ಸುತ್ತಿನ ಪಂದ್ಯಗಳು
ಮೈದಾನ -2
ಬೆಳಿಗ್ಗೆ 9 ಗಂಟೆಗೆ ಎಡಿಕೇರಿ v/s ಚೆರಿಯಮನೆ
10 ಕಾಳೆಯಂಡ v/s ನೂಜಿಬೈಲು
11 ಬೊಳ್ಳುಮಾನಿ v/s ಹೊಸೂರು
ಮ. 1 ಗಂಟೆಗೆ ಮುದಿಯಾರು
v/s ಕೇಟೋಳಿ
ಹಾಗೂ ಮುಂದಿನ ಸುತ್ತಿನ ಪಂದ್ಯಗಳು