*ಗೋಣಿಕೊಪ್ಪಲು, ಏ. 20: ಕೊಡಗು ಹಿಂದೂ ಮಲೆಯಾಳಿ ಸಂಘ ಹಾಗೂ ಅಮ್ಮತ್ತಿ ಕಾರ್ಮಾಡು ಜೈ ಶ್ರೀರಾಮ್ ಮಲೆಯಾಳಿ ಸಂಘ ಆಯೋಜಿಸಿದ 7ನೇ ವರ್ಷದ ಹಿಂದೂ ಮಲೆಯಾಳಿ ಕ್ರಿಕೆಟ್ ಕಪ್ ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಅಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ ಹಿಂದೂ ಮಲೆಯಾಳಿ ಬಾಂದವರ ಕ್ರಿಕೆಟ್ ಉತ್ಸವಕ್ಕೆ ಸಂಘದ ಅಧ್ಯಕ್ಷ ಹರ್ಷವರ್ದನ್ ಚಾಲನೆ ನೀಡಿದರು. ಕೇರಳದ ಚಂಡೆ ವಾದ್ಯದೊಂದಿಗೆ, ಸಾಂಪ್ರದಾಯಿಕ ಉಡುಪಿನೊಂದಿಗೆ ಅಮ್ಮತ್ತಿ ಮುತ್ತಪ್ಪ ದೇವಸ್ಥಾನದಿಂದ ಪಟ್ಟಣದ ಮುಖ್ಯ ಬೀದಿಯ ಮೂಲಕ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು.

ಸುಮಾರು 36 ತಂಡಗಳು ಜಿಲ್ಲೆಯ ವಿವಿಧ ಭಾಗಗಳಿಂದ ಕ್ರಿಕೆಟ್ ಉತ್ಸವದಲ್ಲಿ ಭಾಗವಹಿಸಲಿವೆ. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿ, ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಳ್ಳಲು ಕ್ರೀಡಾಕೂಟಗಳಿಂದ ಸಾಧ್ಯ. ಹಿರಿಯರು ಉಳಿಸಿಕೊಟ್ಟ ಸಂಸ್ಕೃತಿ ಪರಂಪರೆಯನ್ನು ಯುವ ಸಮುದಾಯಕ್ಕೆ ಹಸ್ತಾಂತರಿಸ ಬೇಕಾಗಿದೆ. ಇಂತಹ ಅಮೂಲ್ಯ ಸಂಸ್ಕೃತಿಯನ್ನು ಪೆÇೀಷಿಸುವದು ಹಿರಿಯರ ಕರ್ತವ್ಯ. ವರ್ಷಂಪ್ರತಿ ಕ್ರೀಡಾಕೂಟಗಳು ನಡೆಸುವದರಿಂದ ಜನಾಂಗದ ಬಾಂಧವರು ಒಂದೆಡೆ ಸೇರಿ ಒಗ್ಗಟ್ಟನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದರು.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮಾಚಿಮಂಡ ವಸಂತ್ ಮಾತನಾಡಿ, ಯುವಕರು ಬಲಿಷ್ಠರಾಗಲು ಕ್ರೀಡೆಗಳಿಂದ ಸಾಧ್ಯ. ಮನಸ್ಸಿನ ಶಾಂತಿ ಮತ್ತು ದೇಹದ

(ಮೊದಲ ಪುಟದಿಂದ) ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಉಪಕಾರಿ ಎಂದು ಹೇಳಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ ಕ್ರೀಡಾಕೂಟ ಆಯೋಜನೆಗಳಿಂದ ಕ್ರೀಡಾರ್ಥಿಗಳಿಗೆ ಉತ್ತಮ ಸ್ಪಂದನ ದೊರೆಯುತ್ತಿದೆ. ಸಂಘಟನೆ ಬಲಿಷ್ಠಗೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಧೈರ್ಯ ಮತ್ತು ಮನಸ್ಸುಗಳ ಬಲಿಷ್ಠತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರು ಬಲಿಷ್ಠರಾಗಬೇಕು. ನಮ್ಮ ಸುತ್ತಲಿನ ಪರಿಸರ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿಂದೂ ಮಲೆಯಾಳಿ ಸಂಘ ಜಿಲ್ಲಾ ಸದಸ್ಯ ವಿನೋದ್ ಮಾತನಾಡಿ, ಜಾತಿಯ ನಡುವೆ ಉಪಜಾತಿಗಳು ಹುಟ್ಟಿಕೊಂಡು ಇದು ಸಂಘಟನೆಗಳಿಗೆ ತೊಡಕಾಗುತ್ತಿದೆ. ಪರಿಣಾಮ ಆ ಜನಾಂಗದ ಸಂಸ್ಕೃತಿ, ಪರಂಪರೆಯ ಮೇಲೆ ಒಡಕು ಉಂಟು ಮಾಡುತ್ತಿದೆ. ಯಾವದೇ ಧರ್ಮ ಜಾತಿ ಇದ್ದರೂ ಒಂದೇ ವೇದಿಕೆಯಡಿಯಲ್ಲಿ ಅವರ ಒಗ್ಗಟನ್ನು ಪ್ರದರ್ಶಿಸಬೇಕು. ಈ ಹಿನ್ನೆಲೆ ಕಳೆದ 7 ವರ್ಷಗಳಿಂದ ಹಿಂದೂ ಮಲೆಯಾಳಿ ಸಂಘ ಆಯೋಜಿಸುತ್ತಿರುವದು ಶ್ಲಾಘನೀಯ ಎಂದು ಹೇಳಿದರು.

ಕಾಫಿ ಬೆಳೆಗಾರ ಕುಪ್ಪಂಡ ಗಣಪತಿ, ಕೊಡಗು ಹಿಂದೂ ಮಲೆಯಾಳಿ ಸಂಘದ ಸದಸ್ಯ ಎಂ.ಎಂ. ಲಿಜೇಶ್, ಕೆ.ಕೆ. ರವೀಂದ್ರ, ಸುನೀಲ್ ಕುಮಾರ್, ಸಿ.ಎಂ. ದಿನೇಶ್, ಎಂ.ಹೆಚ್. ರದೀಶ್, ಕೆ.ಎಂ. ರದೀಶ್, ಕೋಶಾಧಿಕಾರಿ ಕೆ.ಎಂ. ಜನೀಶ್, ಸಹ ಕಾರ್ಯದರ್ಶಿ ಟಿ.ಕೆ. ರಾಜೇಶ್, ಸಹಾಯಕ ಕಾರ್ಯದರ್ಶಿ ಎನ್.ಎಸ್. ದರ್ಶನ್, ಕೆ.ಕೆ. ರದೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಮನೋಜ್ ಕುಮಾರ್, ಉಪಾಧ್ಯಕ್ಷ ಆರ್. ಸುಬ್ರಮಣಿ, ಎಂ.ಎಸ್. ದಿನೇಶ್ ಹಾಗೂ ಜೈ ಶ್ರೀರಾಮ್ ಸಂಘದ ಅಧ್ಯಕ್ಷ ಪಿ.ಟಿ. ಸಜಿ, ಉಪಾಧ್ಯಕ್ಷ ಎಂ.ಸಿ. ರಾಧಾಕೃಷ್ಣ, ಗೋಣಿಕೊಪ್ಪಲು ನಗರ ಕೊಡಗು ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷ ಶರತ್ ಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. - ಎನ್.ಎನ್. ದಿನೇಶ್