ಶನಿವಾರಸಂತೆ, ಏ. 20: ಕೊಡ್ಲಿಪೇಟೆ-ದೊಡ್ಡಕೊಡ್ಲಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತಿಯನ್ನು ಆಚರಿಸಲಾಯಿತು.
ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಂಬೇಡ್ಕರ್ ಅಭಿಮಾನಿಗಳ ಸಂಘದ ಪ್ರಮುಖರು ಪುಷ್ಪಾರ್ಚನೆ ಸಲ್ಲಿಸುವದೊಂದಿಗೆ ಚಾಲನೆ ನೀಡಲಾಯಿತು. ನಂತರ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಸಿ. ನಿರ್ವಾಣಪ್ಪ ಮಾತನಾಡಿದರು.
ಶನಿವಾರಸಂತೆ ಅರಣ್ಯ ಉಪ ವಲಯಾಧಿಕಾರಿ ಎನ್.ಸಿ. ಗೋವಿಂದ ಮಾತನಾಡಿ, ಭಾರತ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬರಿಗೆ ಸಮಾನತೆಯನ್ನು ಮತ್ತು ಸಮಾನ ಹಕ್ಕನ್ನು ತಂದುಕೊಟ್ಟಿದ್ದಾರೆ, ಅದೇ ಪ್ರಕಾರವಾಗಿ ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಸಮಾರಂಭದಲ್ಲಿ ಸಂಘಟನೆಗಳ ಪ್ರಮುಖರಾದ ಡಿ.ಸಿ. ಸೋಮಣ್ಣ, ದಿನೇಶ್, ಆನಂದ್, ಡಿ.ಸಿ. ಹೊನ್ನಮ್ಮ, ಟಿ.ಇ. ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿ.ಎಸ್. ವಸಂತ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘಟನೆಗಳ ಪ್ರಮುಖರಾದ ಸೋಮಣ್ಣ, ವಸಂತ್, ಹೇಮಂತ್, ಚಂದ್ರಶೇಖರ್, ನವೀನ್, ನಿಖಿಲ್, ವೃಭದ್ರ, ಹೇಮರಾಜ್, ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯೆ ಗೀತ ಮುಂತಾದವರಿದ್ದರು.