ಸಿದ್ದಾಪುರ, ಏ. 20: ಕಾಶ್ಮೀರದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಎಸ್‍ಕೆಎಸ್‍ಎಸ್‍ಎಫ್ ನೆಲ್ಯಹುದಿಕೇರಿ ಘಟಕ ಆಗ್ರಹಿಸುತ್ತದೆ ಎಂದು ಸಹಚಾರಿ ರಿಲೀಫ್ ಸೆಲ್‍ನ ಜಿಲ್ಲಾ ಸಂಚಾಲಕ ಸರ್ಫುದ್ದೀನ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಎಸ್‍ಕೆಎಸ್ ಎಸ್‍ಎಫ್ ನೆಲ್ಯಹುದಿಕೇರಿ ಘಟಕ ಅಧ್ಯಕ್ಷ ಮೊಹಿನುದ್ದೀನ್, ಕಾರ್ಯದರ್ಶಿ ಸಿ.ಎಚ್. ಜಂಶೀರ್, ಸರ್ಗಾಲಯ ಕಾರ್ಯದರ್ಶಿ ನಿಯಾಝ್ ಮತ್ತು ಕೆ.ಎಂ. ಯೂಸುಫ್ ಇದ್ದರು.