ಮಡಿಕೇರಿ, ಏ. 20: ಹೊದ್ದೂರು - ಕಣ್ಣಬಲಮುರಿ ದೇವಾಲಯದ ಜಾತ್ರಾ ಮಹೋತ್ಸವ ತಾ. 23 ರಿಂದ 25 ರವರೆಗೆ ನಡೆಯಲಿದೆ.

ತಾ. 23 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಅಪರಾಹ್ನ 3 ಗಂಟೆಗೆ ದೇವಾಲಯ ದಿಂದ ಮೂರ್ನಾಡಿನವರೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ದೇವಿಯ ಮೆರವಣಿಗೆ ನಡೆಯಲಿದೆ. ತಾ. 24 ರಂದು ಅಪರಾಹ್ನ 3 ಗಂಟೆಗೆ ವಾಟೆಕಾಡುವಿನಿಂದ ಹೊರಟು ಬಲಮುರಿಯ ದೇವಾಲಯದವರೆಗೆ ವಾದ್ಯಗೋಷ್ಠಿ ಹಾಗೂ ಕೇರಳದ ಚಂಡೆ ವಾದ್ಯದೊಂದಿಗೆ ಪ್ರತಿ ಮನೆಯಿಂದ ಶ್ರೀ ದೇವಿಗೆ ಹಣ್ಣುಕಾಯಿ ಪೂಜೆ ಅರ್ಪಿಸುವದು. ಸಂಜೆ 5 ಗಂಟೆಗೆ ಪವಿತ್ರ ಕಾವೇರಿ ನದಿಯಲ್ಲಿ ಗಂಗಾಸ್ನಾನ ನಂತರ ದೇವಿಯ ಮೆರವಣಿಗೆಯೊಂದಿಗೆ ದೇವಾಲಯ ಪ್ರದಕ್ಷಿಣೆ, ರಾತ್ರಿ 9.30 ಗಂಟೆಯಿಂದ ದೇವಿಗೆ ಅಲಂಕಾರದೊಂದಿಗೆ ಮಹಾಪೂಜೆ, ಮಂಗಳಾರತಿ, ಹೂವಿನ ವರ ಬೇಡುವಿಕೆ, ರಾತ್ರಿ 10.30 ಗಂಟೆಯಿಂದ ವಾದ್ಯಗೋಷ್ಠಿ, ಚಂಡೆ ವಾದ್ಯಮೇಳ ಹಾಗೂ ಸಿಡಿಮದ್ದಿನೊಂದಿಗೆ ಪ್ರತಿ ಮನೆಯಿಂದ ದೇವಿಗೆ ಆರತಿ ಒಪ್ಪಿಸುವದು. ತಾ. 25 ರಂದು ಬೆಳಿಗ್ಗೆ 10 ಗಂಟೆಯಿಂದ 1.30 ರವರೆಗೆ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸುವದು. ಮಂಗಳವಾರ ರಾತ್ರಿ ಮತ್ತು ಬುಧವಾರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.