ನಾಪೆÇೀಕ್ಲು, ಏ. 20: ಸಮೀಪದ ಇತಿಹಾಸ ಪ್ರಸಿದ್ಧ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವರÀ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ಜರುಗಿತು.

ಏ. 15ರಿಂದ ಆರಂಭಗೊಂಡ ದೇವರ ವಾರ್ಷಿಕೋತ್ಸವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು, ಜೋಡಿ ದೇವರ ನೃತ್ಯೋತ್ಸವ, ದೇವರ ಬಲಿ, ರುದ್ರಾಭಿಷೇಕ, ತುಲಾಭಾರ ಸೇವೆ, ಎತ್ತೇರಾಟ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಏ. 18ರಂದು ಪಟ್ಟಣಿ ಹಬ್ಬ, ದೇವರ ನೃತ್ಯ ಬಲಿ, 19ರಂದು ಶ್ರೀ ಹರಿಶ್ಚಂದ್ರ ಮಹಾರಾಜ ಯಾಗ ಮಾಡಿದ ಪುಣ್ಯ ಕ್ಷೇತ್ರ ಹರಿಶ್ಚಂದ್ರದ ಕಾವೇರಿ ನದಿಯಲ್ಲಿ ಈಶ್ವರ ಮತ್ತು ಪಾರ್ವತಿ ದೇವರ ಉತ್ಸವ ಮೂರ್ತಿಗಳ ಅವಭೃತ ಸ್ನಾನ, ರಾತ್ರಿ ದೇವಳದಲ್ಲಿ ಜೋಡಿ ದೇವರ ನೃತ್ಯೋತ್ಸವ ನಡೆಯಿತು. 20ರಂದು ದೇವಳದಲ್ಲಿ ನಡೆದ ಶುದ್ಧ ಕಲಶದೊಂದಿಗೆ ದೇವರ ವಾರ್ಷಿಕ ಉತ್ಸವ ಸಂಪನ್ನಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ಮುಖ್ಯ ಅರ್ಚಕ ದೇವಿ ಪ್ರಸಾದ್ ನೇತೃತ್ವದಲ್ಲಿ ದೇವತಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.