ಗೋಣಿಕೊಪ್ಪಲು,ಏ.21: ಅಖಿಲ ಅಮ್ಮಕೊಡವ ಸಮಾಜ ಮತ್ತು ಈ ಬಾರಿಯ ಉತ್ಸವದ ಆತಿಥ್ಯ ವಹಿಸಿರುವ ಪುತ್ತಾಮನೆ ಕುಟುಂಬದ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ ಅಮ್ಮಕೊಡವ ಕ್ರಿಕೆಟ್ ಉತ್ಸವ ತಾ.28,29 ಹಾಗೂ 30 ರಂದು ಹಾತೂರು ಶಾಲಾ ಮೈದಾನದಲ್ಲಿ ನಡೆಯಲಿದ್ದು ಒಟ್ಟು 24 ಅಮ್ಮಕೊಡವ ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೆÇೀಟಿ ನಡೆಯಲಿರುವದಾಗಿ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ತಿಳಿಸಿದ್ದಾರೆ.ಇಂದು ಗೋಣಿಕೊಪ್ಪಲು ಪ್ರೆಸ್ ಕ್ಲಬ್‍ನಲ್ಲಿ ವಿವರಣೆ ನೀಡಿದ ಅವರು, ಒಟ್ಟು 36 ಅಮ್ಮಕೊಡವ ಕುಟುಂಬಗಳಿದ್ದು 24 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ ಎಂದು ಮಾಹಿತಿ ನೀಡಿದರು. ಪವಿತ್ರ ಕೊಡಗಿನ ತಲಕಾವೇರಿಯ ಇತಿಹಾಸ ಹೊಂದಿರುವ ಮೂಲನಿವಾಸಿ ಕುಟುಂಬ ಇದಾಗಿದ್ದು, ಇದೀಗ ಸುಮಾರು 6000 ಜನಸಂಖ್ಯೆ ಇರುವದಾಗಿ ನುಡಿದರು.ಸರ್ಕಾರದಿಂದ ರೂ.5 ಲಕ್ಷ ಅನುದಾನ ಲಭಿಸುತ್ತಿದ್ದು, ಚುನಾವಣೆ ನಂತರ ಅನುದಾನ ಸಿಗುವದಾಗಿ ಹೇಳಿದ ಅವರು ಸುಮಾರು ರೂ.7 ಲಕ್ಷ ಅಂದಾಜು

(ಮೊದಲ ಪುಟದಿಂದ) ವೆಚ್ಚದಲ್ಲಿ ಮೂರು ದಿನಗಳು ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ರಾಜಕಾರಣಿ ಮುಕ್ತ ಕ್ರಿಕೆಟ್ ಈ ಬಾರಿ ನಡೆಯು ತ್ತಿದ್ದು, ಹಲವು ವಿಶೇಷತೆಗಳೊಂದಿಗೆ ಅದ್ಧೂರಿಯ ಕ್ರೀಡಾಕೂಟ ಆಯೋಜನೆಗೊಂಡಿದೆ ಎಂದರು.

ಮೊದಲ ವರ್ಷ ಅಮ್ಮಕೊಡವ ಸಮಾಜ ಕ್ರಿಕೆಟ್ ಉತ್ಸವ(19) ಏರ್ಪಡಿಸಿತ್ತು ನಂತರ ಪರಿಯಮ್ಮನ ಮನೆ (20 ತಂಡ), ಮನ್ನಕಮನೆ( 24) ತಂಡ ಹಾಗೂ ಇದೀಗ ಪುತ್ತಾಮನೆ ಕುಟುಂಬದ ಸಹಯೋಗ ದಲ್ಲಿ 24 ತಂಡಗಳು ನೋಂದಾವ ಣೆಗೊಂಡಿರುವದಾಗಿ ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಈ ಬಾರಿ ಏರ್ಪಡಿಸಿರುವದಾಗಿ ಹೇಳಿದರು.

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರು, ಪುತ್ತಾಮನೆ ಕುಟುಂಬದ ಅಧ್ಯಕ್ಷ ಪಿ.ಎಂ.ಗಣೇಶ್ ಅವರು ಮಾತನಾಡಿ, ನಮ್ಮದು ಸಣ್ಣ ಜನಾಂಗವಾಗಿದ್ದು, ಕ್ರೀಡಾಕೂಟದಿಂದ ಅಮ್ಮಕೊಡವ ಜನಾಂಗದಲ್ಲಿ ಒಗ್ಗಟ್ಟು ಸಾಮರಸ್ಯಕ್ಕೆ ಕಾರಣವಾಗಿದೆ. ಯುವಕ, ಯುವತಿಯರು, ಹಿರಿಯರು ಪರಸ್ಪರ ಪರಿಚಯಕ್ಕೆ ವೇದಿಕೆಯಾಗಿದೆ. ಅಮ್ಮಕೊಡವ ಜನಾಂಗದಿಂದಲೂ ಉತ್ತಮ ಕ್ರೀಡಾಪಟುಗಳನ್ನು ಹೊರತರಲು ಕ್ರಿಕೆಟ್ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಪುತ್ತಾಮನೆ ಕುಟುಂಬದ ಖಜಾಂಚಿ ಪ್ರಸಾದ್ ಅವರು ಮಾತನಾಡಿ,ತಾ.28 ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಉದ್ಘಾಟನಾ ಸಮಾರಂಭವಿದೆ. ವಿಜೇತ ತಂಡಕ್ಕೆ ರೂ.25 ಸಾವಿರ ನಗದು ಹಾಗೂ ರನ್ನರ್ಸ್ ತಂಡಕ್ಕೆ ರೂ.15 ಸಾವಿರ ನಗದು ಬಹುಮಾನವಲ್ಲದೆ, ಪುತ್ತಾಮನೆ ಕುಟುಂಬ ಸದಸ್ಯರು ಪುತ್ತಾಮನೆ ಕಪ್ ವಿಜೇತ ತಂಡಕ್ಕೆ ವೈಯಕ್ತಿಕ ರೂ.10 ಸಾವಿರ ನಗದು ಬಹುಮಾನ ನೀಡಲಿದ್ದಾರೆ. ಪಾರಿತೋಷಕ ದೊಂದಿಗೆ ಈ ಬಾರಿಯಿಂದ ಪರ್ಯಾಯ ಪಾರಿತೋಷಕವನ್ನು ವಿಜೇತ ತಂಡಕ್ಕೆ ನೀಡಲಾಗುವದು. ಪಂದ್ಯದ ಪುರುಷೋತ್ತಮ, ಸರಣಿ ಪುರುಷೋತ್ತಮ, ಅತ್ಯುತ್ತಮ ಬೌಲರ್, ಆಟಗಾರ ಇತ್ಯಾದಿ ವಿಶೇಷ ಪ್ರಶಸ್ತಿ ನೀಡಲಾಗುವದು ಎಂದು ಹೇಳಿದರು. ಅಖಿಲ ಅಮ್ಮಕೊಡವ ತಂಡ ಮತ್ತು ಪುತ್ತಾಮನೆ ತಂಡಗಳ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಿರುವದಾಗಿ ನುಡಿದರು.

ಗೋಷ್ಠಿಯಲ್ಲಿ ಪುತ್ತಾಮನೆ ಕುಟುಂಬ ಕಾರ್ಯದರ್ಶಿ ಪುತ್ತಾಮನೆ ಜೀವನ್, ನಿರ್ದೇಶಕ ಅಮ್ಮತ್ತೀರ ರಾಜೇಶ್,ಪುತ್ತಾಮನೆ ಶರಣ್ ಉಪಸ್ಥಿತರಿದ್ದರು.