ಚೆಟ್ಟಳ್ಳಿ, ಏ. 21: ಮಡಿಕೇರಿ ಕ್ಷೇತ್ರಕ್ಕೆ ಸ್ಪರ್ಧಿಸಲು ಸಮಾಜವಾದಿ ಪಕ್ಷದಿಂದ ಜಿಲ್ಲಾ ಅಧ್ಯಕ್ಷ ಚೀಯಂಡಿರ ಕಿಶನ್ ಉತ್ತಪ್ಪ ಅವರಿಗೆ ಪಕ್ಷದ ಬಿ ಫಾರಂ ನೀಡಲಾಗಿದೆ.

ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು, ರಾಜ್ಯ ಯುವ ಘಟಕದ ಅಧ್ಯಕ್ಷ ಕಿರನ್ ಚಿಟ್ಟಿ ಸಮ್ಮುಖದಲ್ಲಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಬಿ ಫಾರಂ ನೀಡಲಾಗಿದೆ. ಸಮಾಜವಾದಿ ಪಕ್ಷದಿಂದ ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ದಿಸಲು ಅವಕಾಶ ನೀಡಲಾಗಿದೆ. ಸೋಮವಾರ ಕಿಶನ್ ಉತ್ತಪ್ಪ ನಾಮಪತ್ರ ಸಲ್ಲಿಸಲಿದ್ದಾರೆ.

ಮಡಿಕೇರಿ ತಾಲೂಕಿನ ಹೊಸಕೇರಿ ಗ್ರಾಮದ 31 ವಯಸ್ಸಿದ ಕಿಸನ್ ಉತ್ತಪ್ಪ 7ವರ್ಷ ಚಿತ್ರೋದ್ಯಮದಲ್ಲಿ ನಟನಾಗಿ ಸಹಾಯಕ ನಿರ್ದೇಶಕನಾಗಿ 6 ದಾರಾವಾಹಿ ಹಾಗೂ 3 ಚಲನಚಿತ್ರದಲ್ಲಿ ನಟಿಸಿ ನಿರ್ದೇಶನವನ್ನು ಮಾಡಿದ್ದಾರೆ. ಜೊತೆಗೆ ಹಲವು ವರ್ಷಗಳಿಂದ ಹಲವು ಸಂಘಟನೆಗಳಲ್ಲಿ ಭಾಗವಹಿಸಿದ್ದಾರೆ.

ಕೊಡಗಿನ ಸಂಸ್ಕ್ರತಿ, ಪರಿಸರ ಹಾಗೂ ಕಾವೇರಿ ಮಡಿಲು ದಿನೇ ದಿನೇ ಹಾಳಾಗುತಿದ್ದು ಉಳಿಸಿ ಬೆಳೆಸಲು ಶ್ರಮಿಸುತೇನೆ ಎಂದು ಕಿಶನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.