ತಾ. 29 ರಂದು ಉದ್ಘಾಟನಾ ಸಮಾರಂಭದ ನಂತರ ಪ್ರದರ್ಶನ ಪಂದ್ಯವು ಕೊಡವ ವರಿಯರ್ಸ್ ಇಲೆವೆನ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಡುವೆ ನಡೆಯಲಿದೆ. ಕ್ರೀಡಾಂಗಣದ ಆವರಣದಲ್ಲಿ ರಿಯಾಯಿತಿ ದರದಲ್ಲಿ ಸ್ಟಾಲ್‍ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಆಸಕ್ತರು 91484 86004, 94813 77087 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ. ಪಂದ್ಯಾವಳಿಯ ಕುರಿತು ಮತ್ತು ಟೈಸ್‍ನಲ್ಲಿ ಏನಾದರು ದೋಷಗಳಿದ್ದಲ್ಲಿ ಕ್ರೀಡಾಕೂಟದ ತಾಂತ್ರಿಕ ನಿರ್ದೇಶಕ ಪೊರುಕೊಂಡ ಸುನಿಲ್ 94494 74163, 96861 07297 ಇವರನ್ನು ಸಂಪರ್ಕಿಸಬಹುದಾಗಿದೆ. ಟೈಸ್‍ಗಾಗಿ ತಿತಿತಿ.mಚಿಜಟಚಿಟಿಜಚಿ2018.ಛಿom ನ್ನು ಸಂಪರ್ಕಿಸಬಹುದಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ ಪ್ರಶಸ್ತಿ ವಿಜೇತ, ಅಂತರ್ರಾಷ್ಟ್ರೀಯ ಮಾಜಿ ಕ್ರೀಡಾಪಟು ಅರ್ಜುನ್ ದೇವಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಧ್ವಜಾರೋಹಣವನ್ನು ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಟುಂಬದ ಪಟ್ಟೆದಾರ ಮಡ್ಲಂಡ ಬಿ. ಪೆÇನ್ನಪ್ಪ, ಕ್ರಿಕೆಟ್ ಕಪ್ ಸಮಿತಿ ಅಧ್ಯಕ್ಷ ಮೋನಿಶ್ ಸುಬ್ಬಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬೆಂಗಳೂರಿನ ಉದ್ಯಮಿ ಅರೆಯಡ ಪವಿನ್ ಪೊನ್ನಣ್ಣ ಉಪಸ್ಥಿತರಿರುವರು ಎಂದು ಮೋನಿಶ್ ಸುಬ್ಬಯ್ಯ ತಿಳಿಸಿದರು.

ಇದೇ ಸಂದರ್ಭ ಪ್ರಮುಖರು ಪಂದ್ಯಾವಳಿಯ ಟೈಸ್‍ನ್ನು ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಮಡ್ಲಂಡ ದಿಲನ್ ಪೊನ್ನಣ್ಣ ಹಾಗೂ ಪ್ರತೀಶ್ ಪೂವಯ್ಯ ಉಪಸ್ಥಿತರಿದ್ದರು