ವೀರಾಜಪೇಟೆ, ಏ. 21: ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಇಂದು ಮೂರು ಗಂಟೆ ಎರಡು ನಿಮಿಷಕ್ಕೆ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಬಂದ ಎಂ.ಕೆ. ನಂಜಪ್ಪ ಅವರ ನಾಮಪತ್ರವನ್ನು ಸ್ವೀಕರಿಸದೆ ಚುನಾವಣಾಧಿಕಾರಿ ವಾಪಸ್ ಕಳುಹಿಸಿದರು. ನಾಮಪತ್ರ ಸಲ್ಲಿಸಲು ಅಪರಾಹ್ನ 3ಗಂಟೆ ಕೊನೆ ಗಳಿಗೆಯಾಗಿದ್ದರಿಂದ ಚುನಾವಣಾಧಿಕಾರಿ ಕೆ.ರಾಜು ಅವರು ನಾಮಪತ್ರವನ್ನು ಸೋಮವಾರ ಸಲ್ಲಿಸುವಂತೆ ಅಭ್ಯರ್ಥಿಗೆ ಸೂಚಿಸಿದರು.