ಮಡಿಕೇರಿ, ಏ. 21: ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಅವರ ಪರವಾಗಿ ಮತಯಾಚನಾ ಕಾರ್ಯಕ್ಕೆ ಇಂದು ಚಾಲನೆ ದೊರೆತಿದೆ. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರ ನೇತೃತ್ವದಲ್ಲಿ ವಿಜಯ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಭಿಯಾನ ಆರಂಭಿಸಲಾಯಿತು.

ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಪ್ರಕಾಶ್, ಲಕ್ಷ್ಮಿ, ಸವಿತಾ ರಾಕೇಶ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಮಿನಾಜ್ ಪ್ರವೀಣ್, ಭಾರತಿ ರಮೇಶ್, ಬಿ.ಕೆ. ಅರುಣ್‍ಕುಮಾರ್, ಕಾಳಚಂಡ ಅಪ್ಪಣ್ಣ, ಮನು ಮಹೇಶ್, ಕನ್ನಂಡ ಸಂಪತ್, ಬಾಲಕೃಷ್ಣ, ಸತೀಶ್ ಕುಮಾರ್, ಕಲಾವತಿ, ಚೊಕ್ಕಾಡಿ ಪ್ರೇಮಾ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.