ಮಡಿಕೇರಿ, ಏ. 22: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಚೆರಿಯಮನೆ ಕ್ರಿಕೆಟ್ ಕಪ್ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಮಹಿಳೆಯ ಕುಟುಂಬವಾರು ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಕಟ್ಟೆಮನೆ ತಂಡ ಈ ಬಾರಿಯೂ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ಕಳೆದ ಬಾರಿಯ ರನ್ನರ್ ಅಪ್ ಪ್ರಶಸ್ತಿ ಪಡೆದ ಬೈನೆರವನ ತಂಡ ಈ ಬಾರಿಯೂ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿದೆ.

ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಪಾಲ್ಗೊಂಡಿದ್ದು, ಅಂತಿಮ ಹಂತಕ್ಕೆ ಕಳೆದ ಬಾರಿಯ ತಂಡಗಳೇ ಪ್ರವೇಶ ಪಡೆದವು. ರೋಚಕತೆಯಿಂದ ಕೂಡಿದ್ದ ಅಂತಿಮ ಹಣಾಹಣಿಯಲ್ಲಿ ಕಟ್ಟೆಮನೆ ತಂಡÀ ಮತ್ತೆ ಪಂದ್ಯವನ್ನು ಗೆದ್ದುಕೊಂಡಿತು. ಬೈನೆರವನ ರನ್ನರ್ ಅಪ್‍ನೊಂದಿಗೆ ಮರಳಿತು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಕೋಚನ ಪ್ರವೀಣ್ ಸಹ ತೀರ್ಪುಗಾರರಾಗಿ ಯಾಲದಾಳು ಹರೀಶ್ ಕಾರ್ಯನಿರ್ವಹಿಸಿದರು.