ಸುಂಟಿಕೊಪ್ಪ, ಏ. 22: ಅತ್ತೂರು-ನಲ್ಲೂರು ಗ್ರಾಮದ ಮತ್ತಿಕಾಡುವಿನಲ್ಲಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ದೇವಿಯ ಹಾಗೂ ಗಣಪತಿ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಿವಿಧ ತಾಂತ್ರಿಕ ವೇದಿಕ ಕಾರ್ಯಕ್ರಮಗಳು ತಾ. 25 ರಿಂದ 30 ರವರೆಗೆ ನಡೆಯಲಿದೆ.

ಶ್ರೀ ಕ್ಷೇತ್ರ ಆಚಾರ್ಯ ಬ್ರಹ್ಮಶ್ರೀ ವೇದಮೂರ್ತಿ ಕುಂಟೂರು ಮತ್ತು ಶ್ರೀ ರವಿ ತಂತ್ರಿ ಅವರ ನೇತೃತ್ವದಲ್ಲಿ ತಾ. 25 ರಂದು ಸಂಜೆ 6 ಗಂಟೆಗೆ ದೇವತಾ ಪ್ರಾರ್ಥನೆ ಆಚಾರ್ಯ ವರುಣ, ಪುಣ್ಯಾಹ ವಾಚನ, ಪ್ರಸಾರಶುದ್ಧಿ, ಅಂಕು ರಾಹೋಪಣ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ಪುಣ್ಯಾಹಾಂತ್ಯ ನಡೆಯಲಿದ್ದು, ತಾ. 26 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೊಮ, ಪ್ರೋಕ್ತಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ, ಅಂದು ಮಧ್ಯಾಹ್ನ ಅಂಕುರಪೂಜೆ, ಮಹಾಪೂಜೆ, ಸಂಜೆ 7 ಗಂಟೆಯಿಂದ ಹೋಮ, ಕಲಶಾಭಿಷೇಕ, ಅಂಕುರ ಪೂಜೆ,ಮಹಾಪೂಜೆ. ತಾ. 27 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಶಾಂತಿ ಹೋಮ, ದಹನ ಪ್ರಾಯಶ್ಚಿತ, ತ್ರಿಕಾಲ ಪೂಜೆ, ಮದ್ಯಾಹ್ನ ಅಂಕುರ ಪೂಜೆ ಮಹಾಪೂಜೆ, ಸಂಜೆ 7 ಗಂಟೆಯಿಂದ ಹೋಮ ಕಲಶಾಭೀಷೇಕ, ಅನುಜ್ಞಾ ಕಲಶ ಪೂಜೆ ಮಹಾಪೂಜೆ ನಡೆಯಲಿದೆ. ತಾ. 28 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ತತ್ವ ಕಲಶಾಭಿಷೇಕ ಅನುಜ್ಞಾ ಕಲಶಾಭಿಷೇಕ, ತ್ರಿಕಾಲಪೂಜೆ, ಸಂಜೆ 7 ಗಂಟೆಯಿಂದ ಅನುಜ್ಞಾ ಬಲಿ ಕ್ಷೇತ್ರ ಪಾಲನಲ್ಲಿ, ಅನುಜ್ಞಾ ಪ್ರಾರ್ಥನೆ, ಬಿಂಬ ಶುದ್ಧಿ ಕಲಶ ಪೂಜೆ ಮಹಾಪೂಜೆ, ತಾ. 29 ರಂದು 6 ಗಂಟೆಯಿಂದ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವ, ಕಲಶ ಪೂಜೆ ಕುಂಭೇಶ, ಕರ್ಕರಿ ಪೂಜೆ, ಶಯಾ ಪೂಜೆ, ಅದಿವಾಸ ಹೋಮದ ಅಗ್ನಿ ಜನನ ತತ್ವಕಲಶಾಭಿಷೇಕ ಜೀವ ಕಲಶ ಪೂಜೆ ನಡೆಯಲಿದೆ. ಧ್ಯಾನಾದಿಭಾಷೆ, ಅದಿವಾಸ ಹೋಮ, ಶಿರಸ್ತತ್ವ ಹೋಮ, ಪ್ರತಿಷ್ಠಾಹೋಮ, ಪುಣ್ಯಾಹವಾಚನ ಪ್ರಸಾದ ಶುದ್ಧಿ ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಂತ, ಬ್ರಹ್ಮಕಲಶ ಮಹಾಪೂಜೆ ನಡೆಯಲಿದೆ.

ತಾ. 30 ರಂದು ಕೊನೆಯ ದಿನ ಬೆಳಿಗ್ಗೆ 6 ಗಂಟೆಯಿಂದ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕ, ಪ್ರತಿಷ್ಠಾಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.