ನಾಪೋಕ್ಲು, ಏ. 22: ಸಮೀಪದ ಪೇರೂರು ಗ್ರಾಮದ ದೇವಮಾನಿಯಲ್ಲಿರುವ ತೇಲಪಂಗೇರಿ ಪೂದದೇವರ ಹಬ್ಬವು ತಾ. 22 ರಿಂದ ಆರಂಭವಾಗಿದ್ದು, ತಾ. 28ರ ವರೆಗೆ ಜರುಗಲಿದೆ. ತಾ. 23 ರಂದು ಕೊಟ್ಟಿಪಾಟ್, 24 ರಂದು ದೇವರ ಸಂಚಾರ, 25 ಮತ್ತು 26 ರಂದು ಭಗವತಿ ದೇವರ ಒಕ್ಕ ತಿರುಮುಡಿ ನಡೆಯಲಿದೆ.28 ರಂದು ಪೂದ ಪಟ್ಟಣಿಯೊಂದಿಗೆ ರಾತ್ರಿ ಭಂಡಾರ ತರುವದು. ರಾತ್ರಿ 12 ಗಂಟೆಗೆ ಮೆಲೇರಿಯೊಂದಿಗೆ ಪೂದತೆರೆ, ಮಾಯ್ಯಮ್ಮಾರ್ ಕೋಲ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ ಚೆನಕಾಯಪ್ಪ, ಮಹಾವಿಷ್ಣು, ನಂಬೋಲ ಕಳಿಯೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.