ಮಡಿಕೇರಿ, ಏ. 22: ವಿಧಾನಸಭಾ ಚುನಾವಣೆಯ ಮತದಾನವು ಮೇ 12 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದ್ದು, ಜಿಲ್ಲೆಯ 538 ಮತಗಟ್ಟೆಗಳಿಗೆ ನಿಯೋಜಿಸಿರುವ ವಿವಿಧ ಹಂತದ ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.ವಿಧಾನಸಭಾ ಚುನಾವಣೆ ಸಂಬಂಧ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ನಗರದ ಸಂತ ಜೋಸೆಫರ ಶಾಲೆಯಲ್ಲಿ ಭಾನುವಾರ ಮತಗಟ್ಟೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಪಿ.ಆರ್.ಒ, ಎ.ಪಿ.ಆರ್.ಒ, 2ನೇ, 3ನೇ ಮತ್ತು 4ನೇ ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ ಮಹತ್ತರವಾಗಿದ್ದು, ಮಸ್ಟರಿಂಗ್ ದಿನ ಮತ್ತು ಮತಗಟ್ಟೆಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು. ವಿದ್ಯುನ್ಮಾನ ಮತಯಂತ್ರಗಳು, ಅಣುಕು ಮತದಾನ, ಅಂಚೆ ಮತಪತ್ರ, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಮತ್ತಿತರ ಬಗ್ಗೆ ಹೆಚ್ಚಿನ ನಿಗಾವಹಿಸ ಬೇಕಿದೆ. ಆ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಅವರು ನಿರ್ದೇಶನ ನೀಡಿದರು.

ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕಿದೆ, ಮತದಾರರು ಚುನಾವಣಾ ಅಯೋಗ ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ಚುನಾವಣಾ ಅಯೋಗದ ನಿರ್ದೇಶನದಂತೆ ಮತದಾನ ಮಾಡುವದಕ್ಕೆ ಅವಕಾಶ ನೀಡಬೇಕಿದೆ ಎಂದು ಅವರು ತಿಳಿಸಿದರು.

ಮಸ್ಟರಿಂಗ್ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾಗಬೇಕು. ತಮ್ಮ ತಮ್ಮ ಮತಗಟ್ಟೆಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಸೇರಿಸಿಕೊಂಡು ಪರಸ್ಪರ ಪರಿಚಯ ಮಾಡಿಕೊಳ್ಳುವದು ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಸಹಿ ಮಾಡುವದು. ಯಾವದೇ ಮತಗಟ್ಟೆ ಅಧಿಕಾರಿ ಇತರೆ ಸಿಬ್ಬಂದಿ ಗೈರು ಆದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರಿಗೆ ತಿಳಿಸುವದು ರಜೆ ಹೋದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವದು ಮಸ್ಟರಿಂಗ್ ಪಟ್ಟಿಯಿಂದ ದೃಢಪಡಿಸಿಕೊಳ್ಳುವದು.

ವಿದ್ಯುನ್ಮಾನ ಮತಯಂತ್ರ, ಅಣಕು ಮತದಾನ, ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಅಳವಡಿಸುವದು. ಮತಗಟ್ಟೆಯಲ್ಲಿ ಮತದಾನದಂದು ಪೂರ್ವ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಪವರ್ ಪಾಯಿಂಟ್ ಮೂಲಕ ಮಾಹಿತಿ ನೀಡಲಾಯಿತು.

ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ

ಮತಗಟ್ಟೆ ಅಧಿಕಾರಿಗಳು ಶಾಂತಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಅಧಿಕಾರಿಯಿಂದ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಸಾಮಾಗ್ರಿಗಳನ್ನು ಪಡೆದು ಚುನಾವಣೆ ಕರ್ತವ್ಯ ನಿರ್ವಹಿಸಬೇಕು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನ ಚುನವಾಣೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವದು.

ರ್ಯಾಂಡಮೈಸ್ ತಂಡಕ್ಕೆ ಹಂಚಿಕೆ ಮಾಡಿರುವಂತೆ ಮತಗಟ್ಟೆ ಸಂಖ್ಯೆ ಗುರುತಿಸಿಕೊಳ್ಳುವದು, ತಮ್ಮ ಕಾರ್ಯತಂಡ ಸದಸ್ಯರ ಒಗ್ಗೂಡಿಸುವದು, ಸಾಮಾಗ್ರಿ ವಿತರಿಸುವ ಮಸ್ಟರಿಂಗ್ ಕೌಂಟರ್‍ಗೆ ತೆರಳುವದು ತಂಡದ ಸದಸ್ಯರೊಂದಿಗೆ ಮಸ್ಟರಿಂಗ್ ವಿಭಾಗದಿಂದ ವಿವಿಧ ಸಾಮಾಗ್ರಿ ಪಡೆಯುವದು. ಸಾಮಾಗ್ರಿ ಪಡೆದ ನಂತರ ಮತ್ತೊಮ್ಮೆ ಸಾಮಾಗ್ರಿ ಪರಿಶೀಲಿಸಿಕೊಳ್ಳುವದು. ಮತಗಟ್ಟೆಗೆ ತಲುಪುವ ವಾಹನ ಗುರುತಿಸಿ ಸ್ಥಳ ಕಾಯ್ದಿರಿಸಿಕೊಳ್ಳುವದು.

ಮಸ್ಟರಿಂಗ್ ಕೌಂಟರ್‍ನಿಂದ ಪಡೆಯಬೇಕಾದ ಸಾಮಾಗ್ರಿ ವಿವರ

ಕಂಟ್ರೊಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್, ವಿಎಸ್‍ಡಿಯು ಆಡ್ರಸ್ ಟ್ಯಾಗ್, ವಿಶೇಷ ಟ್ಯಾಗ್, ಗ್ರೀನ್ ಪೇಪರ್ ಸೀಲ್, ಸೀಲ್ ವಿಶೇಷ ಸ್ಟೀಪ್ ಸ್ಟೀಲ್ ಇರುವದೇ ಎಂದು ಖಾತರಿ ಪಡಿಸಿಕೊಳ್ಳುವದು.

ಮತಗಟ್ಟೆಗಾಗಿ ಸಿದ್ಧಪಡಿಸಿದ ಸಾಮಾಗ್ರಿಗಳು

ಗುರುತು ಮಾಡಿದ ಮತದಾರರ ಪಟ್ಟಿಗಳು, ಗುರುತು ಮಾಡಿದ ವರ್ಗೀಕೃತ ಸೇವಾ ಮತದಾರರಪಟ್ಟಿ, ರಬ್ಬರ್, ಮೊಹರು, ಪಿ.ಆರ್.ಒ ದಿನಚರಿ.

ಪ್ರಮುಖ ನಮೂನೆ ಮತ್ತು ಸಾಮಾಗ್ರಿಗಳು

ಮತದಾರರ ರಿಜಿಸ್ಟ್ರಾರ್, ಮತದಾರರ ಚೀಟಿಗಳು ಟೆಂಡರ್ಡ್ ಮತದಾರರ ಪತ್ರಗಳು ಆಕ್ಷೇಪಿತ ಮತದಾರರ ಪಟ್ಟಿ, ಅಂಧ ಮತ್ತು ದುರ್ಬಲರ ಮತದಾರರ ಪಟ್ಟಿ, ಅಂಧ ಮತ್ತು ದುರ್ಬಲರ ಮತದಾರರ ಸಂಗಡಿಗರ ಘೋಷಣೆ, ಬಳಸಿದ ಸೀಲ್ ಪೇಪರ್, ಆಕ್ಷೇಪಿತ ಠೇವಣಿ ರಶೀದಿ ಪುಸ್ತಕ ದಾಖಲೆ ಮತಗಳ ಲೆಕ್ಕ ನಮೂನೆ, ಮತದಾರರ ಆರಂಭ/ಅಂತ್ಯದಲ್ಲಿ ಪಿ.ಆರ್.ಒ ಘೋಷಣೆ,

ಇತರ ಪ್ರಮುಖ ಸಾಮಾಗ್ರಿ

ಸಾಮಾಗ್ರಿಗಳಾದ ಶಾಹಿ10 ಸಿಸಿ 2 ಬಾಟಲ್, ಬಾಣದ ಕತ್ತರಿ, ಗುರುತಿನ ರಬ್ಬರ್ ಸ್ಟ್ಯಾಂಪ್ ಪ್ಯಾಡ್, ಪಿಆರ್ ಒ ಲೋಹದ ಸೀಲ್

ಮತಗಟ್ಟೆ ಅಧ್ಯಕ್ಷ ಅಧಿಕಾರಿಗಳ ಕರ್ತವ್ಯ (ಪಿಆರ್‍ಒ ಕರ್ತವ್ಯ)

ಮತಗಟ್ಟೆ ಹಾಗೂ ಮತದಾನ ಸಮಯದಲ್ಲಿನ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುವದು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಲ್ಲಿ ಸಾಮಾಗ್ರಿಗಳನ್ನು ಪಡೆಯುವದು ಮತ್ತು ನೀಡುವದು ಮತ್ತು ಪಡೆಯುವ ಸಂಪೂರ್ಣ ಜವಾಬ್ದಾರಿ ಅಣುಕು ಮತದಾನ, ಮತದಾನ ಪ್ರಾರಂಭ, ಮತದಾನ ಮುಕ್ತಾಯಗೊಳಿಸುವ ಜವಾಬ್ದಾರಿ. ಮತದಾನದ ದಿವಸ ಎಲ್ಲಾ ಪ್ರಕ್ರಿಯೆಗಳ ಅಂಕಿ ಅಂಶಗಳ ಬಗ್ಗೆ ಚುನಾವಣಾಧಿಕಾರಿ ಗಳಿಗೆ ವರದಿ ಮಾಡುವದು.

ಮೊದಲನೇ ಮತಗಟ್ಟೆ ಅಧಿಕಾರಿಯ ಕರ್ತವ್ಯ

ಪ್ರೆಸೈಡಿಂಗ್ ಅಧಿಕಾರಿಯವರ ಅನುಪಸ್ಥಿತಿಯಲ್ಲಿ ಅವರ ಕರ್ತವ್ಯ ನಿರ್ವಹಿಸುವದು, ಮತದಾರರು ಗುರುತನ್ನು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳುವದು, ಅಯೋಗವು ಸೂಚಿಸಿರುವ ಒಂದು ಗುರುತು ದಾಖಲೆಯನ್ನು ಪಡೆದು ಪರಿಶೀಲಿಸುವದು, ಮತಪಟ್ಟಿಯಲ್ಲಿನ ಮತದಾರರ ಕ್ರಮಸಂಖ್ಯೆಯನ್ನು ಖಾತರಿ ಪಡಿಸಿಕೊಳ್ಳುವದು.

ಎರಡನೇ ಮತಗಟ್ಟೆ ಅಧಿಕಾರಿಯ ಕರ್ತವ್ಯ

ಅಳಿಸಲಾಗದ ಶಾಹಿಯಿಂದ ಗುರುತು ಮಾಡುವದು, ಮತದಾರರ ರಿಜಿಸ್ಟ್ರಾರ್‍ನಲ್ಲಿ ಮತದಾರರ ಮತಪಟ್ಟಿಯಲ್ಲಿ ಕ್ರಮಸಂಖ್ಯೆ ನಮೂದಿಸಿ ಮತದಾರರ ಸಹಿ ಪಡೆಯುವದು. 17ಎ ಷರಾ ಕಾಲಂನಲ್ಲಿ ಮತದಾರರು ಒದಗಿಸಿರುವ ಗುರುತಿನ ದಾಖಲಾತಿಯ ವಿವರ ನಮೂದಿಸಿವದು. ಮತದಾರಿಗೆ ಚುನಾವಣಾ ಅಯೋಗದ ಸೂಚನೆಯಂತೆ ಮತದಾನದ ಚೀಟಿ ನೀಡುವದು.

ಮೂರನೇ ಮತಗಟ್ಟೆ ಅಧಿಕಾರಿಯ ಕರ್ತವ್ಯ ಮತಗಟ್ಟೆ ಕಂಟ್ರೊಲ್ ಯೂನಿಟ್‍ನ ಪ್ರಭಾರ ಮತ ಚಲಾಯಿಸಲು ಅವಕಾಶ ನೀಡುವ ಮೊದಲು ಅಳಿಸಲಾಗದ ಶಾಹಿ ಕೈಬೆರಳಿನಲ್ಲಿರುವ ಬಗ್ಗ್ಗೆ ಖಾತರಿಪಡಿಸಿ ಕೊಳ್ಳುವದು. ಮತದಾರರ ಚೀಟಿ ಪಡೆದು ಮತದಾರನಿಗೆ ವೋಟಿಂಗ್ ಕಂಪಾಟ್‍ಮೆಂಟ್ ಅನುಮತಿ ನೀಡುವದು ಮತದಾರರ ಚೀಟಿ ಕ್ರಮ ಸಂಖ್ಯೆಯಂತೆ ಮತದಾನಕ್ಕೆ ಅನುಮತಿ ನೀಡುವದು. ನಾಲ್ಕನೇ ಮತಗಟ್ಟೆ ಅಧಿಕಾರಿಯು ವಿವಿಪ್ಯಾಟ್ ಡಿಸ್‍ಪ್ಲೇ ಉಸ್ತುವಾರಿ ನೋಡಿಕೊಳ್ಳುವದು.

ಮತಗಟ್ಟೆ ಅಧ್ಯಕ್ಷ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಹಾಗೂ 2ನೇ, 3ನೇ ಮತ್ತು 4ನೇ ಪೊಲಿಂಗ್ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್‍ಕುಮಾರ್, ಚುನಾವಣಾಧಿಕಾರಿ ಗಳಾದ ರಮೇಶ್ ಪಿ. ಕೊನರೆಡ್ಡಿ, ರಾಜು, ತಹಶೀಲ್ದಾರರಾದ ಶಾರದಾಂಭ, ಗೋವಿಂದರಾಜು, ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡೆಮೆಲ್ಲೊ, ಷಂಶುದ್ದೀನ್ ಹಾಗೂ ತರಬೇತಿಗೆ ನಿಯೋಜಿಸಿರುವ ಅಧಿಕಾರಿಗಳು ವಿಧಾನಸಭಾ ಚುನಾವಣೆ ಸಂಬಂಧ ಮಾಹಿತಿ ನೀಡಿದರು.