ಮಡಿಕೇರಿ, ಏ. 22: ವಕೀಲನಾಗಿ ಮೂವತ್ತೇಳು ವರ್ಷಗಳಿಂದ ವೃತ್ತಿಧರ್ಮ ಪಾಲಿಸಿದ್ದೇನೆ. ನ್ಯಾಯಕೋರಿ ಬಂದವರಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದೇನೆ ಹೊರತಾಗಿ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ಬರುವ ಯಾವದೇ ಕೆಲಸವನ್ನು ಇದುವರೆಗೂ ಮಾಡಿಲ್ಲ. ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನನ್ನ ಬಗ್ಗೆ ಪಕ್ಷದ ಹೈಕಮಾಂಡ್‍ಗೆ ಒಲವಿದೆ. ಆದರೆ ಪಕ್ಷದ ರಾಷ್ಟ್ರೀಯ ವಕ್ತಾರ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಅವರ ಕುತಂತ್ರದಿಂದಾಗಿ ತಾನು ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದು ಹೆಚ್.ಎಸ್. ಚಂದ್ರಮೌಳಿ ಹೇಳಿದ್ದಾರೆ.ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟರೂ ಅದಕ್ಕೆ ಅಡ್ಡಿಯುಂಟಾಗಲು ಕಾರಣವೇನು ಎಂಬದರ ಕುರಿತು ಮಾಹಿತಿ ನೀಡಿದರು.2012ನೇ ಇಸವಿಯಲ್ಲಿ ಗೀತಾಂಜಲಿ ಲೈಫ್ ಸ್ಟೈಲ್ ಪ್ರೈವೆಟ್ ಲಿಮಿಟ್ ಹಾಗೂ
ಮೌನ ಮುರಿದ ಚಂದ್ರಮೌಳಿ - ಬ್ರಿಜೇಶ್ ವಿರುದ್ಧ ವಾಗ್ದಾಳಿ
ಮೆಹೂಲ್ ಚೋಕ್ಸಿ ಭಾಗಿಯಾಗಿರುವ ಬಗ್ಗೆ ತನಗೆ 2017ರವರೆಗೂ ತಿಳಿದಿರಲಿಲ್ಲ. ಒಂದು ವೇಳೆ ತಿಳಿದಿದ್ದರೆ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿರುವ ತಾನು ಆ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ. ತಾನು ಮೆಹೂಲ್ ಚೋಕ್ಸಿ ಪ್ರಕರಣದ ವಕಾಲತ್ತು ವಹಿಸಿದ್ದ ವಿಚಾರ ನನಗೆ ಟಿಕೆಟ್ ಘೋಷಣೆಯಾಗುವವರೆಗೂ ಸುದ್ದಿಯಾಗಿರಲಿಲ್ಲ. ಆದರೆ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಈ ತಗಾದೆ ತೆಗೆದು, ನನ್ನನ್ನು ‘ಚೋಕ್ಸಿ ಲಾಯರ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸತೊಡಗಿ ದರು. ಚೋಕ್ಸಿ ಪ್ರಕರಣದ ವಕಾಲತ್ತು ವಹಿಸಿದ್ದವರು ಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿದರೆ, ಅದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ರೀತಿ ಬಿಂಬಿಸಿದರು ಎಂದು ದೂರಿದರು.
ತಾನಾಗಿಯೇ ಟಿಕೆಟ್ ಕೇಳಿರಲಿಲ್ಲ, ಪಕ್ಷವೇ ತನ್ನ ಉತ್ತಮ ವ್ಯಕ್ತಿತ್ವ ಕಂಡು ಟಿಕೆಟ್ ಘೋಷಿಸಿದ್ದರಿಂದ ಸ್ಪರ್ಧೆಗಿಳಿದಿದ್ದೆ. ಆದರೆ ಎಐಸಿಸಿ ಶಿಸ್ತು ಸಮಿತಿಯಲ್ಲಿ ಚೋಕ್ಸಿ ಪ್ರಕರಣವನ್ನು ಮುಂದಿಟ್ಟುಕೊಂಡು ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದಂತೆ ಮಾಡುವಲ್ಲಿ ಬ್ರಿಜೇಶ್ ಕಾಳಪ್ಪ ಪ್ರಯತ್ನಿಸಿ ಬಹುತೇಕ ಯಶಸ್ಸು ಕಾಣುವ ಹಂತದಲ್ಲಿದ್ದಾಗ ಮಾನಸಿಕವಾಗಿ ನೊಂದಿದ್ದ ತಾನು ಪಕ್ಷದ ಒಳಿತಿಗಾಗಿ ಸ್ವತಃ ಸ್ಪರ್ಧೆಯಿಂದ ಹಿಂದೆ ಸರಿಯುವದಾಗಿ ಮುಖ್ಯಮಂತ್ರಿಗಳಿಗೆ ಲಿಖಿತ ಪತ್ರ ನೀಡಿದ್ದೇನೆ. ಪತ್ರದಲ್ಲಿ ಯಾವದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ತಾನು ಪಕ್ಷದ ಪರ ಪ್ರಚಾರ ಮಾಡುವದಾಗಿಯೂ, ಬ್ರಿಜೇಶ್ ಕಾಳಪ್ಪ ಅವರಿಗೆ ಟಿಕೆಟ್ ಕೊಟ್ಟರೂ ತನ್ನ ಅಭ್ಯಂತರವಿಲ್ಲ ಎಂದು ಪ್ರಸ್ತಾಪಿಸಿದ್ದೇನೆ ಎಂದು ಚಂದ್ರಮೌಳಿ ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಟಿ.ಪಿ. ರಮೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಕುಡಾ ಮಾಜಿ ಅಧ್ಯಕ್ಷ ನರಸಿಂಹ ಮೂರ್ತಿ ಇದ್ದರು.