ನಾಪೆÇೀಕ್ಲು, ಏ. 22: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಏಳನೇ ದಿನದ ಪಂದ್ಯಾಟದಲ್ಲಿ ಪೆಮ್ಮಂಡ ಸೋಮಣ್ಣ ಹ್ಯಾಟ್ರಿಕ್ ಗೋಲು ದಾಖಲಿಸುವದರ ಮೂಲಕ ಎಲ್ಲರ ಗಮನ ಸೆಳೆದರೆ, 9 ಆಟಗಾರರೊಂದಿಗೆ ಆಡಿದ ಅಜ್ಜೇಟಿರ ಕುಟುಂಬ ಭರ್ಜರಿ ಜಯ ಗಳಿಸಿತು.ಭಾನುವಾರ ನಡೆದ ಪಂದ್ಯಾಟದಲ್ಲಿ ಅಜ್ಜೇಟಿರ, ಬಾಚಿರ, ಅರಮಣಮಡ, ಅಲ್ಲಂಡ, ಪೆಮ್ಮಂಡ, ಮುಕ್ಕಾಟಿರ, ಕಲಿಯಂಡ, ಬೊಳಕಾರಂಡ, ಚೋಳಂಡ, ಉದಿಯಂಡ, ಮುಂಡ್ಯೋಳಂಡ, ಚೆರುವಾಳಂಡ, ಕರೋಟಿರ, ತೆನ್ನೀರ, ಮಳವಂಡ, ಚೇಂದ್ರಿಮಾಡ, ತಂಡಗಳು ಮುನ್ನಡೆ ಸಾಧಿಸಿವೆ.ಅಜ್ಜೇಟಿರ ಮತ್ತು ಪೆÇಂಜಾಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಜ್ಜೇಟಿರ ತಂಡದಲ್ಲಿ 9 ಜನರು ಆಟವಾಡಿದರೂ ಪೆÇಂಜಾಂಡ ತಂಡವನ್ನು 5-0 ಗೋಲಿನ ಅಂತರದಿಂದ ಮಣಿಸಿತು. ಅಜ್ಜೆಟ್ಟಿರ ತಂಡದ ಪರ ಶಂಭು ಪಳಂಗಪ್ಪ ಹಾಗೂ ಮೋಹನ್ ಸೋಮಯ್ಯ ತಲಾ ಎರಡೆರಡು ಗೋಲು ದಾಖಲಿಸಿದರೆ, ಪೆÇನ್ನಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಬಾಚಿರ ಮತ್ತು ಚೆರಿಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಚಿರ ತಂಡವು ಚೆರಿಯಪಂಡ ತಂಡವನ್ನು 5-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಬಾಚಿರ ತಂಡದ ಪರ ಬಿದ್ದಪ್ಪ ಹಾಗೂ ಪೆÇನ್ನಣ್ಣ ತಲಾ ಎರಡೆರಡು ಗೋಲು, ಶರತ್ ಒಂದು ಗೋಲು ದಾಖಲಿಸಿದರೆ, ಚೆರಿಯಪಂಡ ತಂಡದ ಪರ ಚರಣ್ ಒಂದು ಗೋಲು ದಾಖಲಿಸಿದರು. ಅರಮಣಮಡ ಮತ್ತು ಪೆಬ್ಬಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರಮಣಮಾಡ ತಂಡವು ಪೆಬ್ಬಟ್ಟಿರ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ಅರಮಣಮಾಡ ತಂಡದ ಪರ ಜಗನ್ ಎರಡು, ನಿತೀಶ್, ಅಜಯ್, ಚರ್ಮಣ್ಣ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಮಚ್ಚಾರಂಡ ಮತ್ತು ಅಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಲ್ಲಂಡ ತಂಡವು ಮಚ್ಚಾರಂಡ ತಂಡವನ್ನು ಟೈ ಬ್ರೇಕರ್‍ನಲ್ಲಿ 5-3 ಗೋಲಿನ ಅಂತರದಿಂದ ಮಣಿಸಿತು. ಕುಲ್ಲಚಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೆಮ್ಮಂಡ ತಂಡವು ಕುಲ್ಲಚಂಡ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿತು. ತಂಡದ ಪರ ಸೋಮಣ್ಣ ಮೂರು ಗೋಲು, ಬೋಪಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮುಕ್ಕಾಟಿರ (ಕಡಗದಾಳು) ಮತ್ತು ಚೊಟ್ಟೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಚೊಟ್ಟೆರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ತಂಡದ ಪರ ಅಶ್ವಿನ್ ಚರ್ಮಣ್ಣ ಹಾಗೂ ರೋಹನ್ ಚಿನ್ನಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕಾಂಡೆರ ಮತ್ತು ಕಲಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಕಾಂಡೆರ ತಂಡವನ್ನು 4-1 ಗೋಲಿನಿಂದ ಸೋಲಿಸಿತು. ಕಲಿಯಂಡ ತಂಡದ ಪರ ಮಾಚಯ್ಯ ಎರಡು, ರಾಜಾ ಚಿಣ್ಣಪ್ಪ ಹಾಗೂ ಬಿದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಕಾಂಡೆರ ತಂಡದ ಪರ ಬಾದಲ್ ಬಿದ್ದಪ್ಪ ಒಂದು ಗೋಲು ದಾಖಲಿಸಿದರು. ಬೊಳಕಾರಂಡ ಮತ್ತು ಪುಲ್ಲಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳಕಾರಂಡ ತಂಡವು ಪುಲ್ಲಂಗಡ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿತು. ಬೊಳಕಾರಂಡ ತಂಡದ ಪರ ದಿಲನ್ ಬಿದ್ದಪ್ಪ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.

ಚೋಳಂಡ ಮತ್ತು ಚೋನಿರ ತಂಡಗಳ ನಡುವಿನ ಪಂದ್ಯದಲ್ಲಿ ಚೋಳಂಡ ತಂಡವು ಚೋನಿರ ತಂಡವನ್ನು 3-0 ಗೋಲಿನ ಅಂತರದಿಂದ ಸೋಲಿಸಿತು. ಚೋಳಂಡ ತಂಡದ ಪರ ಧನು ಅಚ್ಚಪ್ಪ, ರಶನ್ ಪೂವಯ್ಯ, ವರುಣ್ ಗಣಪತಿ ತಲಾ ಒಂದೊಂದು ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ದೇಯಂಡ ಮತ್ತು ಉದಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಉದಿಯಂಡ ತಂಡವು ದೇಯಂಡ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಕನ್ನಿಕಂಡ ತಂಡದ ವಾಕ್‍ಓವರ್‍ನಿಂದ ಮುಂಡ್ಯೋಳಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕುಪ್ಪಂಡ ಮತ್ತು ಚೆರುವಾಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆರುವಾಳಂಡ ತಂಡವು ಕುಪ್ಪಂಡ ತಂಡವನ್ನು ಟೈ ಬ್ರೇಕರ್‍ನ 3-2 ಗೋಲಿನಿಂದ ಸೋಲಿಸಿತು. ಎಳ್ತಂಡ ಮತ್ತು ಕರೋಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರೋಟಿರ ತಂಡವು ಎಳ್ತಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು. ಪಾಲೆಕಂಡ ತಂಡದ ವಾಕ್‍ಓವರ್‍ನಿಂದ ತೆನ್ನೀರ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕನ್ನಂಬಿರ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡವು ಕನ್ನಂಬಿರ ತಂಡವನ್ನು ಟೈ ಬ್ರೇಕರ್‍ನ 4-2 ಗೋಲಿನ ಅಂತರದಿಂದ ಮಣಿಸಿತು. ಬೊಪ್ಪಡತಂಡ ಮತ್ತು ಚೇಂದ್ರಿಮಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದ್ರಿಮಾಡ ತಂಡವು ಬೊಪ್ಪಡತಂಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಚೇಂದ್ರಿಮಡ ತಂಡದ ಪರ ಮುತ್ತಣ್ಣ ಎರಡು, ಸೋಮಣ್ಣ ಒಂದು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.