ಮಡಿಕೇರಿ, ಏ. 23: ಅಪ್ರಾಪ್ತೆ ಮೇಲೆ ಈರ್ವರು ಅತ್ಯಾಚಾರ ಮಾಡಿರುವ ಪ್ರಕರಣ ನಡೆದಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಲು ಪೊಲೀಸರು ವಿಳಂಬ ಮಾಡುತ್ತಿದ್ದು, ಇದೀಗ ಸಂತ್ರಸ್ತೆ ಬಾಲಕಿ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಪಡೆಯುವಂತಹ ಪರಿಸ್ಥಿತಿ ಎದುರಾಗಿ ರುವದು ‘ಶಕ್ತಿ’ಗೆ ತಿಳಿದು ಬಂದಿದೆ.

ಒಂದು ತಿಂಗಳ ಹಿಂದೆ ಪೊನ್ನಂಪೇಟೆಯ ಹದಿಮೂರು ವರ್ಷದ ಬಾಲಕಿಯೋರ್ವಳ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಪ್ರಕರಣ ಸದ್ದಿಲ್ಲದೆ ಮುಚ್ಚಿ ಹೋಗಿತ್ತು. ವಿಷಯವರಿತ ಗ್ರಾಮಸ್ಥರು ಈ ಬಗ್ಗೆ ಆರೋಪಿಗಳ ವಿವರ ಸಹಿತ ಜಿಲ್ಲಾಧಿಕಾರಿಗಳಿಗೆ ಇಂದು ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ಚೈಲ್ಡ್ ಲೈನ್ ವಿಭಾಗಕ್ಕೆ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಚೈಲ್ಡ್ ಲೈನ್‍ನವರು ಪೊನ್ನಂಪೇಟೆಗೆ ತೆರಳಿ ಬಾಲಕಿಯನ್ನು ವಶಕ್ಕೆ ಪಡೆದು ಪೊನ್ನಂಪೇಟೆ ಪೊಲೀಸರಿಗೆ ಪೋಕ್ಸೊ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಕೊಳ್ಳುವಂತೆ ಮಾಹಿತಿ ನೀಡಿದ್ದಾರೆ.ಪ್ರಕರಣದ ಬಗ್ಗೆ ಮಾಹಿತಿ ದೊರೆತ ಕೂಡಲೇ ಪೊಲೀಸರು ಸಂತ್ರಸ್ತೆ ಬಾಲಕಿಯರು ಇರುವೆಡೆಗೆ ತೆರಳಿ ಮೊಕದ್ದಮೆ ದಾಖಲಿಸಬೇಕೆಂಬ ನಿಯಮ ಪೋಕ್ಸೊ ಕಾಯ್ದೆ ಯಲ್ಲಿದ್ದರೂ ಪೊಲೀಸರು ಸಂಜೆಯಾದರೂ

(ಮೊದಲ ಪುಟದಿಂದ) ಆಗಮಿಸದೆ ವಿಳಂಬ ಧೋರಣೆ ತಾಳಿದ್ದಾರೆ. ಈತ್ತಲಾದರೂ ಪೊಲೀಸರು ಬಾರದ ಹಿನ್ನೆಲೆಯಲ್ಲಿ ಬಾಲಕಿಯನ್ನು ತಮ್ಮ ಕಚೇರಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಚೈಲ್ಡ್‍ಲೈನ್ ಸಂಸ್ಥೆಯವರು ಬಾಲಕಿಯನ್ನು ಬಾಲಕಿಯರ ಬಾಲಮಂದಿರಕ್ಕೆ ಹಸ್ತಾಂತರಿಸಿದ್ದಾರೆ.

ಸಂಜೆ 7 ಗಂಟೆ ವೇಳೆಗೆ ಚೈಲ್ಡ್‍ಲೈನ್‍ನ ಅಧಿಕಾರಿಯೋರ್ವರಿಗೆ ಕರೆ ಮಾಡಿದ ಪೊಲೀಸರು ‘ತಾವು ಮಡಿಕೇರಿಯಲ್ಲಿದ್ದೇವೆ ಬಾಲಕಿಯನ್ನು ಕರೆತನ್ನಿ ಎಂದಿದ್ದಾರೆ. ಅದಾಗಲೇ ಬಾಲಕಿಯನ್ನು ಬಾಲಮಂದಿರಕ್ಕೆ ಹಸ್ತಾಂತರಿಸಿದ್ದರಿಂದ ಗರಂ ಆಗಿ ಗದರಿಸಿದ್ದಾರೆ.’

ಆದರೆ ಆತುರಲ್ಲಿ ಪೊಲೀಸರು ತಮ್ಮ ಪೊನ್ನಂಪೇಟೆ ಪೊಲೀಸ್ ಠಾಣೆಯ ಸ್ಥಿರ ದೂರವಾಣಿಯಿಂದ ಕರೆ ಮಾಡಿ ಮಡಿಕೇರಿಯಲ್ಲಿರುವದಾಗಿ ಹೇಳಿರುವದು ಏಕೆಂದು ಗೊತ್ತಿಲ್ಲ. ಪ್ರಕರಣ ದಾಖಲಿಸಲು ವಿಳಂಬ ಧೋರಣೆ ಅನುಸರಿಸುತ್ತಿರು ವದೇಕೆಂಬದೇ ಯಕ್ಷ ಪ್ರಶ್ನೆ...?

-ಸಂತೋಷ್