ಕುಶಾಲನಗರ, ಏ. 23: ಕುಶಾಲನಗರ ಬೈಚನಹಳ್ಳಿ ಗೋಮಾಳ ಭೂಮಿಯ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಉಪವಿಭಾಗಾಧಿಕಾರಿ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಬೈಚನಹಳ್ಳಿ ಗ್ರಾಮದ ಸರ್ವೆ ನಂ. 2/1 ರಲ್ಲಿ ವಸಂತಮ್ಮ ಮತ್ತು ಬಿ.ಎಸ್. ರಾಧಾಕೃಷ್ಣ ಎಂಬವರುಗಳು ಒತ್ತುವರಿ ಮಾಡಿಕೊಂಡಿರುವ 1.30 ಎಕರೆ ಮತ್ತು 2.40 ಎಕರೆ ಜಾಗದ ಮೇಲೆ ಕಾವೇರಿ ಸೇನೆ ಸಲ್ಲಿಸಿದ ಅರ್ಜಿ ಮೇರೆಗೆ ಸರಕಾರದ ಪರವಾಗಿ ತೀರ್ಪು ಹೊರ ಬಿದ್ದಿತ್ತು. ಅರ್ಜಿದಾರರು ಹೈಕೋರ್ಟ್ ಮೊರೆ ಹೋದ ಹಿನ್ನೆಲೆ ಇದೀಗ ಆದೇಶಕ್ಕೆ ತಡೆ ನೀಡಲಾಗಿದೆ.