ನಾಪೆÇೀಕ್ಲು, ಏ. 23: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಎಂಟನೇ ದಿನದ ಪಂದ್ಯಾಟದಲ್ಲಿ ಮಲ್ಚಿರ ತಂಡದ ಪರ ಶಾನ್ ಬೋಪಯ್ಯ, ಮಾಪಂಗಡ ತಂಡದ ಪರ ಅಪ್ಪಣ್ಣ ಹಾಗೂ ಬಟ್ಟಿರ ತಂಡದ ಪರ ಮಧು ಮಾಚಯ್ಯ ತಲಾ ಮೂರು ಗೋಲು ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸೋಮವಾರ ನಡೆದ ಪಂದ್ಯಾಟದಲ್ಲಿ ಮಾಳೇಟಿರ (ಕೆದಮಳ್ಳೂರು), ಮಲ್ಚಿರ, ಇಟ್ಟಿರ, ಮಾರ್ಚಂಡ, ಮೇಕೇರಿರ, ಕಲ್ಲೇಂಗಡ, ನಾಯಕಂಡ, ಮಾಪಂಗಡ, ಬಿದ್ದಾಟಂಡ, ಕಾಳಿಮಡ, ಬೊಳ್ಳಚೆಟ್ಟಿರ, ಕೊಕ್ಕಂಡ ಮುಂದಿನ ಸುತ್ತು ಪ್ರವೇಶಿಸಿವೆ.
ಮಾಳೇಟಿರ (ಕೆದಮುಳ್ಳೂರು) ಮತ್ತು ಅಜ್ಜಿನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಳೇಟಿರ ತಂಡವು ಅಜ್ಜಿನಂಡ ತಂಡವನ್ನು 3-0 ಗೋಲಿನ ಅಂತರದಿಂದ ಮಣಿಸಿತು. ಮಾಳೇಟಿರ ತಂಡದ ಪರ ಧನು, ರಾಬಿನ್ ನಾಚಪ್ಪ, ವಿಕಾಸ್ ಮುದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮಲ್ಚಿರ ಮತ್ತು ಪಾಂಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಚಿರ ತಂಡವು ಪಾಂಡಂಡ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ತಂಡದ ಪರ ಶಾನ್ ಬೋಪಯ್ಯ ಮೂರು, ಹರ್ಶನ್ ಹಾಗೂ ತಶ್ವಿನ್ ತಲಾ ಒಂದೊಂದು ಗೋಲು ದಾಖಲಿಸಿದರು. ಮಾದಂಡ ಮತ್ತು ಇಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಇಟ್ಟಿರ ತಂಡವು ಮಾದಂಡ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿತು.
ತಂಡದ ಪರ ನಾಚಪ್ಪ ಒಂದು ಗೋಲು ದಾಖಲಿಸಿದರು. ಮಾರ್ಚಂಡ ಮತ್ತು ಅಪ್ಪಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾರ್ಚಂಡ ತಂಡವು ಅಪ್ಪಚಂಡ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ತಂಡದ ಪರ ಜೋಯಪ್ಪ ಎರಡು, ಸೋಮಣ್ಣ ಮತ್ತು ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಮೇಕೇರಿರ ಮತ್ತು ಅಮ್ಮಣಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೇಕೇರಿರ ತಂಡವು ಅಮ್ಮಣಿಚಂಡ ತಂಡವನ್ನು 5-1 ಗೋಲಿನ ಅಂತರದಿಂದ ಸೋಲಿಸಿತು. ಮೇಕೇರಿರ ತಂಡದ ಪರ ನಿತಿನ್ ತಿಮ್ಮಯ್ಯ ಎರಡು, ನೆಹಲ್ ತಮ್ಮಯ್ಯ ಹಾಗೂ ಅಭಿನವ್ ಗಣಪತಿ ತಲಾ ಒಂದೊಂದು ಗೋಲು ದಾಖಲಿಸಿದರು. ಕಲ್ಲೇಂಗಡ ಮತ್ತು ಕರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲ್ಲೇಂಗಡ ತಂಡವು ಕರವಂಡ ತಂಡವನ್ನು 2-1 ಗೋಲಿನಿಂದ ಸೋಲಿಸಿತು.
ಕಲ್ಲೇಂಗಡ ತಂಡದ ಪರ ಪವನ್ ಚಂಗಪ್ಪ ಎರಡು ಗೋಲು ದಾಖಲಿಸಿದರೆ, ಕರವಂಡ ತಂಡದ ಪರ ಕಿಶನ್ ಸೋಮಯ್ಯ ಒಂದು ಗೋಲು ದಾಖಲಿಸಿದರು. ಕುಂಚೆಟ್ಟಿರ ಮತ್ತು ನಾಯಕಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಯಕಂಡ ತಂಡವು ಕುಂಚೆಟ್ಟಿರ ತಂಡವನ್ನು 2-0 ಗೋಲಿನಿಂದ ಪರಾಭವಗೊಳಿಸಿತು. ತಂಡದ ಪರ ಜೋಯಪ್ಪ ಹಾಗೂ ಜೀವನ್ ಬೋಪಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ತಡಿಯಂಗಡ ಮತ್ತು ಮಾಪಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಪಂಗಡ ತಂಡವು ತಡಿಯಂಗಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಮಾಪಂಗಡ ತಂಡದ ಪರ ಅಪ್ಪಣ್ಣ ಮೂರು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಪಾರುವಂಗಡ ಮತ್ತು ಬಿದ್ದಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಿದ್ದಾಟಂಡ ತಂಡವು ಪಾರುವಂಗಡ ತಂಡವನ್ನು 2-1 ಗೋಲಿನಿಂದ ಸೋಲಿಸಿತು. ಬಿದ್ದಾಟಂಡ ತಂಡದ ಪರ ಪೆÇನ್ನಣ್ಣ ಎರಡು ಗೋಲು ದಾಖಲಿಸಿದರೆ, ಪಾರುವಂಗಡ ತಂಡದ ಪರ ಕೀರ್ತನ್ ಪೆÇನ್ನಪ್ಪ ಒಂದು ಗೋಲು ದಾಖಲಿಸಿದರು. ಕಾಳಿಮಡ ಮತ್ತು ಮೊಣ್ಣಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳಿಮಡ ತಂಡವು ಮೊಣ್ಣಂಡ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ಕಾಳಿಮಡ ತಂಡದ ಪರ ಕಿರಣ್ ಎರಡು, ಡಾನಿ ಹಾಗೂ ಕುಶಾಲಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಬೊಳ್ಳಚೆಟ್ಟಿರ ಮತ್ತು ಬಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಬಟ್ಟಿರ ತಂಡವು ಬೊಳ್ಳಚೆಟ್ಟಿರ ತಂಡವನ್ನು 4-0 ಗೋಲಿನಿಂದ ಪರಾಭವಗೊಳಿಸಿತು. ಬಟ್ಟಿರ ತಂಡದ ಪರ ಮಧು ಮಾಚಯ್ಯ ಮೂರು, ತೀರ್ತನ್ ಒಂದು ಗೋಲು ದಾಖಲಿಸಿದರು. ಪಳಂಗಂಡ ಮತ್ತು ಕೊಕ್ಕಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಕ್ಕಂಗಡ ತಂಡವು ಪಳಂಗಂಡ ತಂಡವನ್ನು ಟೈ ಬ್ರೇಕರ್ನಲ್ಲಿ 4-3 ಗೋಲಿನಿಂದ ಮಣಿಸಿತು.