ಮಡಿಕೇರಿ, ಏ. 23: ಗಾಳಿಬೀಡಿನ ಸ್ನೇಹಿತರ ಯುವಕ ಸಂಘದ 35ನೇ ವಾರ್ಷಿಕೋತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟ ಸಂಭ್ರಮದಿಂದ ಜರುಗಿತು.
ಮಡಿಕೇರಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಗಾಳಿಬೀಡು ಚಪ್ಪಂಡ ಕೆರೆ ಸ್ನೇಹಿತರ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಗಾಳಿಬೀಡು ಅಡ್ಕದಬಾಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಾಳಿಬೀಡು ಗ್ರಾ.ಪಂ. ಉಪಾಧ್ಯಕ್ಷೆ ಬದಲೇರ ರಾಣಿ ಮುತ್ತಣ್ಣ ಉದ್ಘಾಟಿಸಿದರು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಮಿನಿ ಮೆರಥಾನ್, ಭಾರದ ಗುಂಡು ಎಸೆಯುವದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು.
ವಾಲಿಬಾಲ್ನಲ್ಲಿ ಅಪ್ಪು ಫ್ರೆಂಡ್ಸ್ ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಮಡಿಕೇರಿಯ ಕೆವೈಸಿಸಿ ತಂಡ ಪಡೆದುಕೊಂಡಿತು.
ಮಹಿಳೆಯರಿಗಾಗಿ ನಡೆದ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಾಳಿಬೀಡಿನ ವರಡ ಯುವತಿ ಮಂಡಳಿ ಹಾಗೂ ದ್ವಿತೀಯ ಸ್ಥಾನವನ್ನು ಚಪ್ಪಂಡ ಕೆರೆ ಗಾಳಿಬೀಡು ತಂಡ ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಸ್ಥಾಪಕ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಾಳಿಬೀಡು ಗ್ರಾ.ಪಂ. ಸದಸ್ಯರಾದ ಎಂ.ಡಿ. ಸುಭಾಷ್ ಆಳ್ವ, ಸಂಘದ ಅಧ್ಯಕ್ಷ ಕೆ.ಎ. ಮೋಹನ್, ಗಾಳಿಬೀಡು ದವಸ ಭಂಡಾರದ ಅಧ್ಯಕ್ಷ ಕೊಂಬಾರನ ಲಿಂಗರಾಜು, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಗಾಳಿಬೀಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೊಂಬಾರನ ಗಣಪತಿ, ಹೆಬ್ಬೆಟ್ಟಗೇರಿ ಸರಕಾರಿ ಶಾಲೆಯ ಮುಖ್ಯ ಉಪಾಧ್ಯಾಯ ಕೋಳುಮುಡಿಯನ ಬಾಲಕೃಷ್ಣ, ಅಪ್ಪು ಫ್ರೆಂಡ್ಸ್ ತಂಡದ ನಾಯಕ ಅಪ್ಪು, ಭೂಕಂದಾಯ ಇಲಾಖೆಯ ಕರಕರನ ಮಧುಕರ, ಶ್ರೀರಾಜರಾಜೇಶ್ವರಿ ಶಾಲೆಯ ದೈಹಿಕ ಶಿಕ್ಷಕ ಕೋಚನ ತೇಜಸ್, ಕ್ರೀಡಾಕೂಟದ ತೀರ್ಪುಗಾರ ಕೋಚನ ಜನಾರ್ಧನ್ ಉಪಸ್ಥಿತರಿದ್ದರು.
ಕೆ.ಕೆ. ಲಿಖಿತ ಹಾಗೂ ಕೆ.ಎಸ್. ಗಾನ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಮೋಹನ್ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪವನ್ ಕುಮಾರ್ ಮಂಡಿಸಿದರು.