ಮಡಿಕೇರಿ, ಏ. 23: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿಂದು ಕುಟ್ಟನ, ನೆರಿಯನ, ಹೊಸೂರು, ಹೊಸಮನೆ, ಜತ್ತಣ್ಣನ, ಮುದ್ಯನ, ಬಾರಿಕೆ ಕುಟುಂಬ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ನೆರಿಯನ ತಂಡ 4 ವಿಕೆಟ್‍ಗೆ 63 ರನ್ ಗಳಿಸಿದರೆ, ಚಾತುರನ ತಂಡ 8 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿ ಕೇವಲ 2 ರನ್‍ಗಳ ಅಂತರದಿಂದ ಸೋಲನುಭವಿಸಿತು. ಅಣ್ಣಚ್ಚಿರ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದರೆ, ಬಿದ್ರುಪಣೆ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕೆದಂಬಾಡಿ ಸಿ ತಂಡ 4 ವಿಕೆಟ್‍ಗೆ 73 ರನ್ ಗಳಿಸಿದರೆ, ಪೊನ್ನೇಟಿ ತಂಡ 5 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿ 18 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮೂಡಗದ್ದೆ ತಂಡ 4 ವಿಕೆಟ್‍ಗೆ 87 ರನ್ ಗಳಿಸಿದರೆ, ಮುದ್ಯನ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಜತ್ತಣ್ಣನ ತಂಡ 4 ವಿಕೆಟ್‍ಗೆ 88 ರನ್ ಗಳಿಸಿದರೆ, ಅಚ್ಚಾಂಡಿರ ತಂಡ 5 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿ 5 ರನ್‍ಗಳ ಅಂತರದಿಂದ ಸೋಲನುಭವಿಸಿತು.

ಜೈನಿರ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದರೆ, ಕುಟ್ಟನ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಚರಕನ ತಂಡ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 60 ರನ್ ಗಳಿಸಿದರೆ, ಚಂಡಿರ ತಂಡ 5 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಹೊಸೂರು ತಂಡ 5 ವಿಕೆಟ್‍ಗೆ 71 ರನ್ ಗಳಿಸಿದರೆ, ಕಟ್ಟೆಕೊಡಿ ತಂಡ 7 ವಿಕೆಟ್‍ಗೆ 62 ರನ್ ಗಳಿಸಿ 9 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬಾರಿಕೆ ತಂಡ 4 ವಿಕೆಟ್‍ಗೆ 79 ರನ್ ಗಳಿಸಿದರೆ, ಪರ್ಲಕೋಟಿ ತಂಡ 7 ವಿಕೆಟ್ ಕಳೆದುಕೊಂಡು 47 ರನ್‍ಗಳ ಅಂತರದಿಂದ ಸೋಲನುಭವಿಸಿತು. ಹೊಸಮನೆ ತಂಡ 7 ವಿಕೆಟ್‍ಗೆ 68 ರನ್ ಗಳಿಸಿದರೆ, ಬಿದ್ರುಪಣೆ ತಂಡ 4 ವಿಕೆಟ್ ಕಳೆದುಕೊಂಡು 15 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕೆದಂಬಾಡಿ ಸಿ ತಂಡ 5 ವಿಕೆಟ್‍ಗೆ 58 ರನ್ ಗಳಿಸಿದರೆ, ನೆರಿಯನ ತಂಡ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಜತ್ತಣ್ಣನ ತಂಡ 2 ವಿಕೆಟ್‍ಗೆ 101 ರನ್ ಗಳಿಸಿದರೆ, ಚಂಡಿರ ತಂಡ 6 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿ 28 ರನ್‍ಗಳ ಅಂತರದಿಂದ ಸೋಲನುಭವಿಸಿತು.