*ಗೋಣಿಕೊಪ್ಪಲು, ಏ. 23: ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯರವ ಸಮಾಜದಿಂದ ನಡೆದÀ ಕಾಳಕೋಟ್ಲೆತ್ಲೇರಂಡ 7ನೇ ವರ್ಷದ ಯರವ ಕ್ರಿಕೆಟ್ ಕಪ್ ಪಂದ್ಯಾಟದಲ್ಲಿ ಬ್ರಹ್ಮಗಿರಿ ‘ಬಿ’ ತಂಡವನ್ನು ಉದ್ದೇಶಪೂರ್ವಕವಾಗಿ ಪಂದ್ಯಾವಳಿಯಿಂದ ಹೊರ ಹಾಕಿ ಪಂದ್ಯಾಟದ ನಿಯಮವನ್ನು ಮುರಿದು ಬ್ರಹ್ಮಗಿರಿ ತಂಡವನ್ನು ಕ್ರಿಕೆಟ್ ಪಂದ್ಯಾಟದ ಆಯೋಜಕರು ಅಪಮಾನ ಮಾಡಿದ್ದಾರೆ ಎಂದು ಬ್ರಹ್ಮಗಿರಿ ತಂಡದ ಯುವಕರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮಗಿರಿ ತಂಡದ ಸದಸ್ಯರು 19 ರಿಂದ 22 ರವರೆಗೆ ತಿತಿಮತಿಯಲ್ಲಿ ನಡೆದ ಯರವ ಸಮಾಜದ ಕ್ರಿಕೆಟ್ ಪಂದ್ಯಾಟದಲ್ಲಿ 36 ತಂಡಗಳು ಭಾಗವಹಿಸಿದ್ದವು. ಈ ತಂಡಗಳ ಜೊತೆ ಬ್ರಹ್ಮಗಿರಿ ‘ಎ’ ಮತ್ತು ‘ಬಿ’ ಎಂಬ ಎರಡು ತಂಡ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಬ್ರಹ್ಮಗಿರಿ ‘ಬಿ’ ತಂಡವು ‘ಬಿ’ ಗುಂಪಿನಲ್ಲಿ ಸ್ಪರ್ಧಿಸಿ ಸೋಲಿಗೆ ಮಣಿದಿತು. ಬ್ರಹ್ಮಗಿರಿ ‘ಎ’ ತಂಡವು ‘ಸಿ’ ಗುಂಪಿನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಪ್ರಥಮ ಸ್ಥಾನದಲ್ಲಿತ್ತು. ‘ಎ’ ಮತ್ತು ‘ಬಿ’ ಗುಂಪಿನಲ್ಲಿದ್ದ ತಂಡವು ಮೂರು ಪಂದ್ಯವನ್ನು ಗೆಲ್ಲುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದೆ. ‘ಸಿ’ ಗುಂಪಿನಲ್ಲಿದ್ದ ಬ್ರಹ್ಮಗಿರಿ ‘ಎ’ ತಂಡವೂ ನಾಲ್ಕು ಪಂದ್ಯವನ್ನು ಗೆದ್ದರೂ ಸೆಮಿ ಫೈನಲ್ ಪ್ರವೇಶಕ್ಕೆ ಅವಕಾಶ ಕಲ್ಪಿಸದೆ ವಂಚಿಸಿದ್ದಾರೆ. ಮತ್ತೆ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಸೆಮಿ ಫೈನಲ್ ಪ್ರವೇಶ ಎಂದು ಸಮಿತಿ ತೀರ್ಮಾನಿಸಿರುವದು ಖಂಡನೀಯ ಎಂದರು.

ಮೂರು ಪಂದ್ಯ ಗೆದ್ದ ತಂಡವನ್ನು ಸೆಮಿಫೈನಲ್‍ಗೆ ಪ್ರವೇಶ ಕಲ್ಪಿಸಿ ಫೈನಲ್ ಪಂದ್ಯ ನಡೆಸಿದ್ದಾರೆ. ನಮ್ಮಿಂದ ಪ್ರವೇಶ ಶುಲ್ಕ ಪಡೆದು ನಮ್ಮನ್ನು ಅವಮಾನಿಸಿ ಪಂದ್ಯಾವಳಿಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದರು.

ಕಳೆದ ನಾಲ್ಕು ದಿನಗಳಿಂದ 50ಕ್ಕೂ ಹೆಚ್ಚು ಯರವ ಯುವಕ ಯುವತಿಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಕ್ರೀಡಾ ಉತ್ಸವದಲ್ಲಿ ಭಾಗವಹಿಸಿದ್ದಾರೆ. ವಾಹನಗಳ ಬಾಡಿಗೆ 20 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದೇವೆ. ಆದರೆ ಆಯೋಜಕರು ಇಂತಹ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ಯರವ ಸಮೂದಾಯವನ್ನೇ ಅಪಮಾನ ಮಾಡಿದ್ದಾರೆ. ಕಳೆದ 7 ವರ್ಷಗಳಿಂದ ದಾನಿಗಳಿಂದ ಸಂಗ್ರಹಿಸಿದ ಲಕ್ಷಾಂತರ ರೂಪಾಯಿಗಳನ್ನು ಚೆನ್ನಯ್ಯನಕೋಟೆ ಗ್ರಾಮದ ಕೆಲವು ಸದಸ್ಯರುಗಳೇ ಸಂಗ್ರಹಿಸಿ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಣದ ಆಮಿಷಕ್ಕೆ ಬಲಿಯಾಗಿ ಗೆಲುವಿನ ತಂಡವನ್ನು ಬಿಟ್ಟು ತಮಗೆ ಬೇಕಾದ ತಂಡವನ್ನು ಗೆಲ್ಲಿಸಿ ಪ್ರಶಸ್ತಿ ಹಾಗೂ ನಗದು ಪಡೆದುಕೊಂಡು ಕ್ರೀಡಾಕೂಟ ಆಯೋಜಿಸಿದ ಸದಸ್ಯರೇ ಹಣ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಬ್ರಹ್ಮಗಿರಿ ತಂಡದ ಆಟಗಾರರಾದ ಅಜಿತ್, ಮಿಥುನ್, ಮಂಜು, ರಂಜು, ರವಿ, ವಸಂತ, ಜೋಗ, ಅಯ್ಯಪ್ಪ, ತಿಮ್ಮ, ಗಣೇಶ, ಕರಿಯ, ದಾಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.