ಸುಂಟಿಕೊಪ್ಪ: ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಸುಂಟಿಕೊಪ್ಪ ಗ್ರಾ.ಪಂ. ಪಿಡಿಓ ಮೇದಪ್ಪ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಇಲ್ಲಿನ ಟಾಟಾ ಕಾಫಿ ತೋಟದ ಲೈನ್ ಮನೆಗಳಿಗೆ ತೆರಳಿದ ಪಿಡಿಓ ಪ್ರತಿಯೊಬ್ಬರೂ ಯಾರಿಗೆ ಮತ ಚಲಾಯಿಸಿದ್ದೀರ ಎಂದು ಖಾತ್ರಿ ಪಡಿಸಲು ಈ ಬಾರಿ ಮತಯಂತ್ರದಲ್ಲಿ ಅವಕಾಶವಿದೆ ಇದರಿಂದ ನಿಮ್ಮ ಅನುಮಾನವನ್ನು ನಿವಾರಿಸಿಕೊಳ್ಳಬಹುದು ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಭವ್ಯ ಭಾರತದ ಅಭಿವೃದ್ಧಿಗೆ ಮುನ್ನಡಿ ಇಡಬೇಕೆಂದರು. ಮತ ಯಂತ್ರದ ಪ್ರಾತ್ಯಕ್ಷಿಕೆಯನ್ನು ಸೆಕ್ಟರ್ ಅಧಿಕಾರಿ 15 ವರದರಾಜನ್ ಸಹಾಯಕ ಸಿಬ್ಬಂದಿ ನವೀನ್ ಮತದಾರರಿಗೆ ತೋರಿಸಿದರು. ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್ ಸುರೇಶ್, ಶ್ರೀನಿವಾಸ್ ಹಾಗೂ ಡಿ.ಎಂ. ಮಂಜುನಾಥ್ ಇದ್ದರು.ಗುಡ್ಡೆಹೊಸೂರು: ವಿಧಾನಸಭೆ ಚುನಾವಣೆ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಗುಡ್ಡೆಹೊಸೂರಿನಲ್ಲಿ ನಡೆಯಿತು. ಈ ಅಭಿಯಾನವನ್ನು ದಿಶಾ ಫೌಂಡೇಷನ್ ಮೈಸೂರು, ಸ್ವೀಪ್ ಕೊಡಗು ಮತ್ತು ಎ.ಡಿ.ಆರ್. ಕರ್ನಾಟಕ ಮತ್ತು ಗುಡ್ಡೆಹೊಸೂರು ಗ್ರಾ.ಪಂ. ವತಿಯಿಂದ ನಡೆಸಲಾಯಿತು. ಅಂಗಡಿ ಮುಂಗಟ್ಟುಗಳಲ್ಲಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಅಳವಡಿಸಲಾಯಿತು. ಈ ಸಂದರ್ಭ ದಿಶಾ ಫೌಂಡೇಷನ್ನ ಕಾರ್ತಿಕ್ ಮತ್ತು ಸಿದ್ದರಾಜ್ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಪಿ.ಡಿ.ಓ. ಶ್ಯಾಂ ಮತ್ತು ಕಾರ್ಯದರ್ಶಿ ನಂಜುಂಡಸ್ವಾಮಿ, ಕೀರ್ತಿ, ವಿಜಯ್ ಮುಂತಾದವರು ಹಾಜರಿದ್ದರು.ವೀರಾಜಪೇಟೆ: ಮತದಾನವೇ ಪ್ರಜಾಪ್ರಭುತ್ವದ ತಳಹದಿ, ಮತ ಚಲಾಯಿಸುವದು ಪ್ರತಿಯೊಬ್ಬರ ಹಕ್ಕು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಇಲ್ಲಿನ ಪಟ್ಟಣ ಪಂಚಾಯಿತಿ ನೌಕರರು ಪ್ರತಿಜ್ಞೆ ಮಾಡಿದರು. ಮುಖ್ಯಾಧಿಕಾರಿ ಎನ್.ಪಿ. ಹೇಮ್ಕುಮಾರ್ ಅವರ ಸಮ್ಮುಖದಲ್ಲಿ ಪಂಚಾಯಿತಿ ಕಚೇರಿಯ ಎಲ್ಲ ಸಿಬ್ಬಂದಿಗಳು, ನೀರು ಸರಬರಾಜು ವಿಭಾಗದ ಸಿಬ್ಬಂದಿಗಳು, ಪೌರ ಕಾರ್ಮಿಕರು ಪ್ರತಿಜ್ಞಾ ವಿಧಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಮಾತನಾಡಿದ ಹೇಮ್ ಕುಮಾರ್ ಅವರು ಪಟ್ಟಣ ಪಂಚಾಯಿತಿಯ ನೌಕರರು ಸ್ವಯಂ ಪ್ರೇರಿತವಾಗಿ ಮತದಾನ ಮಾಡುವದಲ್ಲದೆ ಮತದಾನ ಮಾಡುವಂತೆ ಸಾರ್ವಜನಿಕವಾಗಿ ಮತದಾರರನ್ನು ಪ್ರೇರೇಪಿಸಬೇಕು. ನೌಕರರು ಮತದಾನ ಮಾಡಲು ವಿಫಲಗೊಂಡರೆ ಅಂತಹವರಿಗೆ ಒಂದು ದಿನದ ವೇತನವನ್ನು ಮುನ್ಸೂಚನೆ ನೀಡದೆ ಕಡ್ಡಾಯವಾಗಿ ಕಡಿತಗೊಳಿಸಲಾಗವದು ಎಂದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನೌಕರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಚೆಟ್ಟಳ್ಳಿ: ಕರ್ನಾಟಕ ವಿಧಾನಸಭಾ ಚುನಾ ವಣೆ ಹಿನ್ನೆಲೆ ಮತ ದಾರರಲ್ಲಿ ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋ ಗದ ವತಿಯಿಂದ ಮತದಾರರ ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು. ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದ ಮತಗಟ್ಟೆ ಸಂಖ್ಯೆ 227 ಜಿಎಲ್ಪಿ ಶಾಲೆಯಲ್ಲಿ ಹಾಗೂ ಚೆಟ್ಟಳ್ಳಿ ವಾರ್ಡ್ನ ಮತಗಟ್ಟೆ ಸಂಖ್ಯೆ 228 ಮತ್ತು 231ರ ಮತದಾನ ಜಾಗೃತಿ ಅಭಿಯಾನವನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆಸಲಾಯಿತು. ಮತದಾನದ ವಿ.ವಿ. ಪ್ಯಾಡ್ ತರಬೇತಿ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧಿಕಾರಿ ಟಿ. ಜೀವನ್ ಕುಮಾರ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಟಿ. ವಿಶ್ವನಾಥ್, ಬಿಲ್ಕಲೆಕ್ಟರ್ ಚಂದ್ರಶೇಖರ್, ಕಂಪ್ಯೂಟರ್ ಆಪರೇಟರ್ ಪ್ರಶಾಂತ್ ಸಂಬಂಧಿಸಿದ ಬೂತ್ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.