ಮಡಿಕೇರಿ, ಏ. 24: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಚೆರಿಯಮನೆ ಕ್ರಿಕಟ್ ಹಬ್ಬದಲ್ಲಿ ನೆರಿಯನ ತಂಡ ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದರೆ, ಉಳುವಾರನ, ಮುದಿಯಾರು, ಪೊಕ್ಕುಳಂಡ್ರ, ಹುದೇರಿ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಬಾಕಿಲನ ತಂಡ 5 ವಿಕೆಟ್‍ಗೆ 65 ರನ್ ಗಳಿಸಿದರೆ, ಮುಕ್ಕಾಟಿ (ಕೈಕೇರಿ) ತಂಡ ಮೂರು ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಬಾರಿಕೆ ತಂಡ 4 ವಿಕೆಟ್‍ಗೆ 75 ರನ್ ಗಳಿಸಿದರೆ, ಬಿಟ್ಟಿರ ತಂಡ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 31 ರನ್ ಮಾತ್ರ ಗಳಿಸಿ, 44 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುಟ್ಟನ ತಂಡ 5 ವಿಕೆಟ್‍ಗೆ 62 ರನ್ ಗಳಿಸಿದರೆ, ಮುದ್ಯನ ತಂಡ 6 ವಿಕೆಟ್ ಕಳೆದುಕೊಂಡು 40 ರನ್ ಗಳಿಸಿ 22 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬಾರಿಕೆ ತಂಡ 4 ವಿಕೆಟ್‍ಗೆ 66 ರನ್‍ಗಳಿಸಿದರೆ, ಜತ್ತಣ್ಣನ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಹೊಸೂರು ತಂಡ 4 ವಿಕೆಟ್‍ಗೆ 58 ರನ್ ಗಳಿಸಿದರೆ, ಉಳುವಾರನ ‘ಎ’ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಕೊಟ್ಟಕೇರಿಯನ ತಂಡ 6 ವಿಕೆಟ್‍ಗೆ 44 ರನ್ ಗಳಿಸಿದರೆ, ಮುದಿಯಾರು ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸೇರಿತು.
ಪೊಕ್ಕುಳಂಡ್ರ ತಂಡ 1 ವಿಕೆಟ್‍ಗೆ ಭರ್ಜರಿ 114 ರನ್‍ಗಳ ಬೃಹತ್ ಮೊತ್ತ ಪೇರಿಸಿದರೆ, ಉತ್ತರವಾಗಿ ಆಡಿದ ಲಕ್ಕಪ್ಪನ ತಂಡ 4 ವಿಕೆಟ್‍ಗೆ ಕೇವಲ 46 ರನ್ ಮಾತ್ರ ಗಳಿಸಿ 68 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಪೊಕ್ಕುಳಂಡ್ರ ಧನೋಜ್ ವೈಯಕ್ತಿಕ ಔಟಾಗದೆ 51 ಹಾಗೂ ರಕ್ಷಿತ್ ಔಟಾಗದೆ 43 ರನ್ ಗಳಿಸಿ ಗಮನ ಸೆಳೆದರು. ಲಕ್ಕಪ್ಪನ ತಂಡದಲ್ಲಿ ಮೂವರು ಮಹಿಳಾ ಆಟಗಾರ್ತಿಯರು ಆಟವಾಡಿ ಗಮನ ಸೆಳೆದರು. ನಡುವಟ್ಟಿರ ತಂಡ 5 ವಿಕೆಟ್‍ಗೆ 47 ರನ್ ಗಳಿಸಿದರೆ, ಹುದೇರಿ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಉಳುವಾರನ ತಂಡ 5 ವಿಕೆಟ್‍ಗೆ 102 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕುಟ್ಟನ ತಂಡ 3 ವಿಕೆಟ್ ಕಳೆದುಕೊಂಡು ಕೇವಲ 46 ರನ್ ಮಾತ್ರ ಗಳಿಸಿ 56 ರನ್‍ಗಳ ಅಂತರದಿಂದ ಸೋಲನುಭವಿಸಿತು. ಜತ್ತಣ್ಣನ ತಂಡ 8 ವಿಕೆಟ್‍ಗೆ 49 ರನ್ ಗಳಿಸಿದರೆ, ನೆರಿಯನ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಹೊಸಮನೆ ತಂಡ 6 ವಿಕೆಟ್‍ಗೆ 66 ರನ್ ಗಳಿಸಿದರೆ, ಮುದಿಯಾರು ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು.