ನಾಪೆÇೀಕ್ಲು, ಏ. 24: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಒಂಬತ್ತನೇ ದಿನದ ಪಂದ್ಯಾಟದಲ್ಲಿ ಚಂದುರ ತಂಡದ ಪರ ಪ್ರಧಾನ್ ಪೂವಣ್ಣ ಹಾಗೂ ಮುರುವಂಡ ತಂಡದ ಪರ ಅಯ್ಯಣ್ಣ ತಲಾ ಮೂರು ಗೋಲು ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಮಂಗಳವಾರ ನಡೆದ ಪಂದ್ಯಾಟದಲ್ಲಿ ನುಚ್ಚಿಮಣಿಯಂಡ, ಪುಚ್ಚಿಮಂಡ, ಪಳೆಯಂಡ, ಮದ್ರಿರ, ಚಂದುರ, ಪಾಡೆಯಂಡ, ಪಟ್ರಪಂಡ, ಕುಂಡ್ಯೋಳಂಡ, ಮುರುವಂಡ, ನಾಗಂಡ, ಕೀತಿಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮದ್ರಿರ ಮತ್ತು ಬಡ್ಡಿರ ತಂಡಗಳ ನಡುವಿನ ಪಂದ್ಯದಲ್ಲಿ ಮದ್ರಿರ ತಂಡವು ಬಡ್ಡಿರ ತಂಡವನ್ನು 1-0 ಗೋಲಿನಿಂದ ಮಣಿಸಿತು. ತಂಡದ ಪರ ಹರಿನ್ ಅಯ್ಯಪ್ಪ ಒಂದು ಗೋಲು ದಾಖಲಿಸಿದರು. ಚಂದುರ ಮತ್ತು ಪೆÇರ್ಕೊಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಂದುರ ತಂಡವು ಪೆÇರ್ಕೊಂಡ ತಂಡವನ್ನು 3-0 ಗೋಲಿನಿಂದ ಮಣಿಸಿತು. ಚಂದುರ ತಂಡದ ಪರ ಪ್ರಧಾನ್ ಪೂವಣ್ಣ ಮೂರು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಮುರುವಂಡ ಮತ್ತು ಮುಂಡಚಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಮುರುವಂಡ ತಂಡವು ಮುಂಡಚಾಡಿರ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ತಂಡದ ಪರ ಅಣ್ಣಯ್ಯ ಮೂರು, ತನುಶ್ ಹಾಗೂ ಶಶಾಂಕ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ನುಚ್ಚಿಮಣಿಯಂಡ ಮತ್ತು ಕಂಬೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ನುಚ್ಚಿಮಣಿಯಂಡ ತಂಡವು ಕಂಬೆಯಂಡ ತಂಡವನ್ನು ಟೈ ಬ್ರೇಕರ್ನ 5-4 ಗೋಲಿನ ಅಂತರದಿಂದ ಸೋಲಿಸಿತು. ನುಚ್ಚಿಮಣಿಯಂಡ ತಂಡದ ಪರ ಪೂವಣ್ಣ, ಬೋಪಣ್ಣ, ಕಾರ್ತಿಕ್, ಸೋನು, ಯಶ್ವಿನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಕಂಬೆಯಂಡ ತಂಡದ ಪರ ಅಣ್ಣಯ್ಯ, ಶತಿ, ತರುಣ್, ಬೋಜಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಪುಚ್ಚಿಮಂಡ ಮತ್ತು ಚಂಗೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಪುಚ್ಚಿಮಂಡ ತಂಡವು ಚಂಗೇಟಿರ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ತಂಡದ ಪರ ಸುಬ್ಬಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಪಳೆಯಂಡ ಮತ್ತು ಮೂವೆರ ತಂಡಗಳ ನಡುವಿನ ಪಂದ್ಯದಲ್ಲಿ ಪಳೆಯಂಡ ತಂಡವು ಮೂವೆರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಪಳೆಯಂಡ ತಂಡದ ಪರ ಸುರಿ ಸುಬ್ಬಯ್ಯ ಎರಡು, ರಾಬಿನ್ ದೇವಯ್ಯ ಒಂದು ಗೋಲು ದಾಖಲಿಸಿದರು. ಪಾಡೆಯಂಡ ಮತ್ತು ಮಂಡಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಪಾಡೆಯಂಡ ತಂಡವು ಮಂಡಂಗಡ ತಂಡವನ್ನು 4-1 ಗೋಲಿನಿಂದ ಸೋಲಿಸಿತು. ಪಾಡೆಯಂಡ ತಂಡದ ಪರ ಸಂತೋಷ್ ಅಯ್ಯಪ್ಪ ಎರಡು, ಮಂದಣ್ಣ, ವರಣ್, ತಲಾ ಒಂದೊಂದು ಗೋಲು ದಾಖಲಿಸಿದರೆ, ಮಂಡಂಗಡ ತಂಡದ ಪರ ವಿಕ್ಕಿ ಮಂದಣ್ಣ ಒಂದು ಗೋಲು ದಾಖಲಿಸಿದರು. ಅಪ್ಪಚೆಟ್ಟೋಳಂಡ ಮತ್ತು ಪಟ್ರಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ರಪಂಡ ತಂಡವು ಅಪ್ಪಚೆಟ್ಟೋಳಂಡ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು. ಪಟ್ರಪಂಡ ತಂಡದ ಪರ ವಿತ ಗಣಪತಿ ಎರಡು ಗೋಲು ದಾಖಲಿಸಿದರೆ, ಅಪ್ಪಚೆಟ್ಟೋಳಂಡ ತಂಡದ ಪರ ಯಾನ್ ಬೋಪಣ್ಣ ಒಂದು ಗೋಲು ದಾಖಲಿಸಿದರು. ಕುಂಡ್ಯೋಳಂಡ ಮತ್ತು ಕೋಳೆರ ತಂಡಗಳ ನಡುವಿನ ಪಂದ್ಯದಲ್ಲಿ ಕುಂಡ್ಯೋಳಂಡ ತಂಡವು ಕೋಳೆರ ತಂಡವನ್ನು 2-1 ಗೋಲಿನಿಂದ ಮಣಿಸಿತು. ಕುಂಡ್ಯೋಳಂಡ ತಂಡದ ಪರ ಪ್ರಫುಲ್ ಪೆÇನ್ನಪ್ಪ ಹಾಗೂ ಲಾಂಛನ್ ಚಿಣ್ಣಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಕೋಳೆರ ತಂಡದ ಪರ ಮಿಲನ್ ಮಾಚಯ್ಯ ಒಂದು ಗೋಲು ದಾಖಲಿಸಿದರು. ಚೇನಿರ ಮತ್ತು ನಾಗಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಗಂಡ ತಂಡವು ಚೇನಿರ ತಂಡವನ್ನು 1-0 ಗೋಲಿನಿಂದ ಮಣಿಸಿತು. ಕೀತಿಯಂಡ ಮತ್ತು ಮಂದೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೀತಿಯಂಡ ತಂಡವು ಮಂದೆಯಂಡ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿತು. ತಂಡದ ಪರ ಕೀತಿಯಂಡ ದೇವಯ್ಯ ಒಂದು ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.