*ಗೋಣಿಕೊಪ್ಪಲು, ಏ. 25: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 15 ದಿನಗಳ ಕಾಲ ಈಜು, ಸ್ಕೇಟಿಂಗ್, ಫುಟ್‍ಬಾಲ್, ಹಾಕಿ ಬಾಸ್ಕೆಟ್ ಬಾಲ್ ಬ್ಯಾಡ್ಮಿಂಟನ್ ಹಾಗೂ ಫಿಟ್‍ನೆಸ್ ಬೇಸಿಗೆ ತರಬೇತಿ ಶಿಬಿರ ನಡೆಯಿತು.

ಶಿಬಿರದಲ್ಲಿ 148 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರವನ್ನು ಪ್ರಾಂಶುಪಾಲ ಬೆನ್ನಿಕುರಿಯೊಕೋಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೇಸಿಗೆ ಶಿಬಿರ ಅತ್ಯುಪಯುಕ್ತವಾದುದು. ಮೊಬೈಲ್, ಟಿವಿ ನೋಡಿ ಸಮಯ ಹಾಳುಮಾಡುವದಕ್ಕಿಂತ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದು ಮುಖ್ಯ. ಶಿಬಿರದಲ್ಲಿ ಕಲಿತದ್ದನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಹೇಳಿದರು.