ಮಡಿಕೇರಿ, ಏ. 25: ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ಸುಭದ್ರ ಕರ್ನಾಟಕವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರು ಜಿಲ್ಲೆಯಲ್ಲಿ ಗೊಂದಲಕ್ಕೆ ಒಳಗಾಗದೆ ಹೈಕಮಾಂಡ್ ಪ್ರಕಟಿಸಿರುವ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷೆ ಸರಿತಾ ಪೂಣಚ್ಚ ಅವರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಪಕ್ಷದ ಹೈಕಮಾಂಡ್ ಬಂಡಾಯ ಸ್ಪರ್ಧೆಯ ವಿಚಾರವನ್ನು ಇತ್ಯರ್ಥಪಡಿಸಲಿದೆ. ಜಿಲ್ಲೆಯ ಎಲ್ಲ ನಾಯಕರು, ಕಾರ್ಯಕರ್ತರು, ಬಿಜೆಪಿ ಮುಕ್ತ ಕೊಡಗಿಗೆ ಶ್ರಮಿಸುವದು ಖಚಿತ. ಪಕ್ಷದ ಅಧಿಕೃತ ಅಭ್ಯರ್ಥಿಗಳು ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್‍ಗೆ ಇದು ಜಿಲ್ಲೆಯಲ್ಲಿ ಉಳಿವಿನ ಪ್ರಶ್ನೆಯೂ ಆಗಿದ್ದು, ಎಲ್ಲರೂ ಒಂದಾಗಿ ಚುನಾವಣೆ ಎದುರಿಸಲಿದ್ದಾರೆ ಎಂದು ಸರಿತಾ ಹೇಳಿದ್ದಾರೆ.