ನಾಪೆÇೀಕ್ಲು, ಏ. 25: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹತ್ತನೇ ದಿನದ ಪಂದ್ಯಾಟದಲ್ಲಿ ಮೂಕಳೆಮಾಡ ತಂಡದ ಪರ ಗಣಪತಿ ಹ್ಯಾಟ್ರಿಕ್ ಸೇರಿ ಐದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸುವದರ ಮೂಲಕ ಎಲ್ಲರ ಗಮನ ಸೆಳೆದರು.

ಅಂತೆಯೇ ಮೂರು ಬಾರಿಯ ಚಾಂಪಿಯನ್ ಅತಿಥೇಯ ಕುಲ್ಲೇಟಿರ ತಂಡ ಸೇರಿ ಚೋಯಮಾಡಂಡ, ಮಂಡೇಟಿರ, ತೆಕ್ಕಡ, ಮೂಕಳಮಾಡ, ಮುಕ್ಕಾಟಿರ (ಮಾದಾಪುರ), ಅಪ್ಪಾರಂಡ, ತೀತಿರ, ಪಟ್ಟಚೆರುವಂಡ, ಕೊಂಗೇಟಿರ, ಬೊವ್ವೇರಿಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಕೇಕಡ ಮತ್ತು ಚೋಯಮಾಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಯಮಾಡಂಡ ತಂಡವು ಕೇಕಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಚೋಯಮಾಡಂಡ ತಂಡದ ಪರ ಸೋಮಣ್ಣ, ಸುನ್ನು ಗಣಪತಿ, ಬಿಪಿನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಮಂಡೇಟಿರ ಮತ್ತು ಅಜ್ಜಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಟಿರ ತಂಡವು ಅಜ್ಜಮಾಡ ತಂಡವನ್ನು ಟೈ ಬ್ರೇಕರ್‍ನ 3-1 ಗೋಲಿನಿಂದ ಮಣಿಸಿತು. ಚೆಂಬಂಡ ತಂಡದ ಗೈರು ಹಾಜರಿನ ಕಾರಣದಿಂದ ತೆಕ್ಕಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಮೂಕಳಮಾಡ ಮತ್ತು ಮಲ್ಲಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕಳಮಡ ತಂಡವು ಮಲ್ಲಂಗಡ ತಂಡವನ್ನು

5-0 ಗೋಲಿನಿಂದ ಮಣಿಸಿತು. ತಂಡದ ಪರ ಗಣಪತಿ ಹ್ಯಾಟ್ರಿಕ್ ಸೇರಿದಂತೆ ಐದು ಗೋಲು ದಾಖಲಿಸಿದರು.

ಮುಕ್ಕಾಟಿರ (ಮಾದಾಪುರ) ಮತ್ತು ಕುಟ್ಟೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಕುಟ್ಟೇಟಿರ ತಂಡವನ್ನು 3-0 ಗೋಲಿನಿಂದ ಪರಾಭವಗೊಳಿಸಿತು. ತಂಡದ ಪರ ಸಂಜು ತಿಮ್ಮಯ್ಯ, ರತನ್ ಕುಶಾಲಪ್ಪ, ದೀಪಕ್ ಚಂಗಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಬಲ್ಯಮಂಡ ಮತ್ತು ಅಪ್ಪಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಪ್ಪಾರಂಡ ತಂಡವು ಬಲ್ಯಮಂಡ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ತಂಡದ ಪರ ಜಿಪ್ಸಿ ಮಂದಣ್ಣ ಮೂರು, ಸುಮನ್ ಎರಡು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.

ಐಚೆಟ್ಟಿರ ಮತ್ತು ತೀತಿರ (ಹುದಿಕೇರಿ) ತಂಡಗಳ ನಡುವಿನ ಪಂದ್ಯದಲ್ಲಿ ತೀತಿರ ತಂಡವು ಐಚೆಟ್ಟಿರ ತಂಡವನ್ನು ಟೈ ಬ್ರೇಕರ್‍ನಲ್ಲಿ 3-2 ಗೋಲಿನಿಂದ ಸೋಲಿಸಿತು. ಮುಕ್ಕಾಟಿರ (ಭೇತ್ರಿ) ಮತ್ತು ಕುಲ್ಲೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಮುಕ್ಕಾಟಿರ ತಂಡವನ್ನು

4-1 ಗೋಲಿನ ಅಂತರದಿಂದ ಮಣಿಸಿತು. ಕುಲ್ಲೇಟಿರ ತಂಡದ ಪರ ನಂದ, ಯಾಶಿಕ್, ಲೋಕೇಶ್, ಶುಭಂ ತಲಾ ಒಂದೊಂದು ಗೋಲು ದಾಖಲಿಸಿದರೆ, ಮುಕ್ಕಾಟಿರ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು.

ಕಂಜಿತಂಡ ಮತ್ತು ಪಟ್ಟಚೆರುವಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಚೆರುವಂಡ ತಂಡವು ಕಂಜಿತಂಡ ತಂಡವನ್ನು 2-1 ಗೋಲಿನಿಂದ ಸೋಲಿಸಿತು. ಪಟ್ಟಚೆರುವಂಡ ತಂಡದ ಪರ ಗಗನ್ ಹಾಗೂ ಆಯುಷ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಕಂಜಿತಂಡ ತಂಡದ ಪರ ಪೂವಣ್ಣ ಒಂದು ಗೋಲು ದಾಖಲಿಸಿದರು. ಕೊಂಗೇಟಿರ ಮತ್ತು ಮೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಗೇಟಿರ ತಂಡವು ಮೇರಿಯಂಡ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು. ಕೊಂಗೇಟಿರ ತಂಡದ ಪರ ಅನೀಶ್ ಉತ್ತಯ್ಯ ಎರಡು ಗೋಲು ದಾಖಲಿಸಿದರೆ, ಮೇರಿಯಂಡ ತಂಡದ ಪರ ನಿಖಿಲ್ ಬೋಪಣ್ಣ ಒಂದು ಗೋಲು ದಾಖಲಿಸಿದರು. ಚೆರಿಯಪಂಡ ತಂಡದ ಗೈರು ಹಾಜರಿನಿಂದ ಬೊವ್ವೇರಿಯಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು.