ಮಡಿಕೇರಿ, ಏ. 25: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ದೇವಾಯಿರ, ಬೈಲೋಳಿ, ಮೊಟ್ಟನ, ಕಲ್ಲುಮುಟ್ಲು, ಬಿಳಿಯಂಡ್ರ, ಊರುಬೈಲು, ಬಳ್ಳಡ್ಕ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಮೊಟ್ಟನ ತಂಡ 4 ವಿಕೆಟ್‍ಗೆ 87 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಪಟ್ಟಡ ತಂಡ 2 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿ 18 ರನ್‍ಗಳ ಅಂತರದಿಂದ ಸೋಲನಭವಿಸಿತು. ಪಟ್ಟಡ ಹರೀಶ್ ಸಾಂತ್ವೇರಿ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಪಂದ್ಯಾವಳಿಯಲ್ಲಿ ಮೊಟ್ಟನ ಅರುಣ್ ಪುಟ್ಟ ಔಟಾಗದೆ 64 ರನ್ ಗಳಿಸಿ ಗಮನ ಸೆಳೆದರು. ಕೋಳಿಬೈಲು ತಂಡ 3 ವಿಕೆಟ್‍ಗೆ ಭರ್ಜರಿ 127 ರನ್ ಕಲೆ ಹಾಕಿತು. ತೊತ್ತಿಯನ ಎ ತಂಡ 7 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿ 54 ರನ್‍ಗಳ ಅಂತರದಿಂದ ಸೋಲನುಭವಿಸಿತು. ತೊತ್ತಿಯನ ತಂಡದ ರಾಖೇಶ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕೋಳಿಬೈಲು ಕುಶ್ವವಂತ್ ಔಟಾಗದೆ 42 ಹಾಗೂ ಉದಯ 48 ರನ್ ಗಳಿಸಿ ಗಮನ ಸೆಳೆದರು.
ಪಳಂಗೋಟು ತಂಡ 5 ವಿಕೆಟ್‍ಗೆ 70 ರನ್ ಗಳಿಸಿದರೆ, ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಕೊನೆಯ ಘಳಿಗೆಯಲ್ಲಿ ಬಳ್ಳಡ್ಕ ತಂಡ 5 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬಳ್ಳಡ್ಕ ತೀರ್ಥವರ್ಣ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಬಿಳಿಯಂಡ್ರ ತಂಡ 5 ವಿಕೆಟ್‍ಗೆ 80 ರನ್ ಗಳಿಸಿದರೆ, ಯಾಪರೆ ತಂಡ 4 ವಿಕೆಟ್‍ಗೆ 58 ರನ್ ಗಳಿಸಿ 22 ರನ್‍ಗಳ ಅಂತರದಿಂದ ಸೋಲನುಭವಿಸಿತು. ಯಾಪರೆ ರಾಜೇಶ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.
ಊರುಬೈಲು ತಂಡ 6 ವಿಕೆಟ್‍ಗೆ ಭರ್ಜರಿ 125 ರನ್ ಗಳಿಸಿದರೆ, ಮುಂಡೋಡಿ ತಂಡ 6 ವಿಕೆಟ್‍ಗೆ 66 ರನ್ ಗಳಿಸಿ 59 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮುಂಡೋಡಿ ಕಂದ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಊರುಬೈಲು ನವೀನ್ 54 ರನ್ ಗಳಿಸಿ ಗಮನ ಸೆಳೆದರು. ತುಂತಜೆ ತಂಡ 6 ವಿಕೆಟ್‍ಗೆ 85 ರನ್ ಗಳಿಸಿದರೆ, ನಿಡುಬೆ ಮನೆ ತಂಡ 5 ವಿಕೆಟ್‍ಗೆ 72 ರನ್ ಗಳಿಸಿ 13 ರನ್‍ಗಳ ಅಂತರದಿಂದ ಸೋಲನುಭವಿಸಿತು. ನಿಡುಬೆ ಸಂತು ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕೋಳಿಬೈಲು ತಂಡ 2 ವಿಕೆಟ್‍ಗೆ 80 ರನ್ ಕಲೆ ಹಾಕಿದರೆ, ಬಿಳಿಯಂಡ್ರ ತಂಡ ಒಂದು ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕೋಳಿಬೈಲು ಉದಯ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕುಯ್ಯಮುಡಿ ತಂಡ 3 ವಿಕೆಟ್‍ಗೆ 61 ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ 4 ಓವರ್‍ನಲ್ಲಿ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಕುಯ್ಯಮುಡಿ ದೀಕ್ಷಿತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕಲ್ಲುಮುಟ್ಲು ಚೇತನ್ (ಚಿಂತು) 47 ರನ್ ಗಳಿಸಿ ಗಮನ ಸೆಳೆದರು.
ಮೊಟ್ಟನ ತಂಡ 2 ವಿಕೆಟ್‍ಗೆ 105 ರನ್ ಗಳಿಸಿದರೆ, ಕೂರನ ತಂಡ 8 ವಿಕೆಟ್ ಕಳೆದುಕೊಂಡು 46 ರನ್ ಮಾತ್ರ ಗಳಿಸಿ 59 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕೂರನ ಕಿಶೋರ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಮೊಟ್ಟನ ಅರುಣ್ ಪುಟ್ಟ 52 ರನ್ ಗಳಿಸಿ, ಗಮನ ಸೆಳೆದರು. ಬೈಲೋಳಿ ತಂಡ 5 ವಿಕೆಟ್‍ಗೆ 71 ರನ್ ಗಳಿಸಿದರೆ, ಮೂವನ ತಂಡ 5 ವಿಕೆಟ್‍ಗೆ 57 ರನ್ ಗಳಿಸಿ 14 ರನ್ ಗಳ ಅಂತರದಿಂದ ಸೋಲನುಭವಿಸಿತು. ಮೂವನ ಕಿರಣ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ದೇವಾಯಿರ ತಂಡ 5 ವಿಕೆಟ್‍ಗೆ 70 ರನ್ ಗಳಿಸಿದರೆ, ತುಂತಜೆ ತಂಡ 7 ವಿಕೆಟ್‍ಗೆ 46 ರನ್ ಮಾತ್ರ ಗಳಿಸಿ 24 ರನ್‍ಗಳ ಅಂತರದಿಂದ ಸೋಲನುಭವಿಸಿತು. ತುಂತಜೆ ಖುಷಿ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.