ನಾಪೋಕ್ಲು, ಏ. 25: ಸಮೀಪದ ಬಲ್ಲಮಾವಟಿ ರಾಟೆ ಭಗವತಿ ದೇವಾಲಯದ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ಜರುಗಿತು.ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದು ಹಬ್ಬದಲ್ಲಿ ದೇವರನ್ನು ರಾಟೆಯ ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ಆಚರಣೆ ನಡೆಯಿತು.

ಈ ಉತ್ಸವಕ್ಕಾಗಿ ದೇವಾಲಯದ ಮುಂಬಾಗದಲ್ಲಿ ದೊಡ್ಡ ಕಬ್ಬಿಣದ ರಾಟೆಯನ್ನು ನಿರ್ಮಿಸಲಾಗಿತ್ತು ಈ ರಾಟೆ ಉಯ್ಯಾಲೆ ಹಬ್ಬ ಎರಡು ವರ್ಷಕೊಮ್ಮೆ ನಡೆಯುತ್ತದೆ. ಈ ಆಚರಣೆ ಹಲವಾರು ವರ್ಷಗಳಿಂದ ಈ ಭಾಗದ ಜನರ ನಂಬಿಕೆಯ ಪ್ರತೀಕವಾಗಿ ನಡೆದುಕೊಂಡು ಬಂದಿದ್ದು ಮಧ್ಯಾಹ್ನ ದೇವರ ವಿಗ್ರಹವನ್ನು ರಾಟೆಯಲ್ಲಿ ತೂಗಲಾಯಿತು. ಬಲ್ಲಮಾವಟಿ ಪೇರೂರು ಹಾಗೂ ಪುಲಿಕೋಟು ಗ್ರಾಮಗಳ ಭಕ್ತರು ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಉತ್ಸವದ ಅಂಗವಾಗಿ ದೇವಾಲಯದಲ್ಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಸಂಜೆ ವಿವಿಧ ಕೋಲಗಳು ಜರುಗಿದವು. ಆಂಗೋಲ ಪೊಂಗೋಲ ಎಂಬ ಸಾಂಪ್ರದಾಯಿಕ ಆವರಣೆಯಲ್ಲಿ ಹರಕೆ ಹೊತ್ತ ಭಕ್ತರು ಪಾಲ್ಗೊಂಡಿದ್ದರು.