ಕುಶಾಲನಗರ, ಏ. 25: ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸುಧಾರಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ಹೇಳಿದರು.ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ಕುಶಾಲನಗರ ವಾಸವಿ ಮಹಲ್‍ನಲ್ಲಿ ಹಮ್ಮಿಕೊಂಡಿದ್ದ ವಾಸವಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ಬಾಂಧವರ ಪವಿತ್ರ ಆಚರಣೆಯಾದ ವಾಸವಿ ಜಯಂತಿಯಂದು ಸರಕಾರ ರಜೆ ಘೋಷಿಸಬೇಕೆಂದು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ವಾಸವಿ ಯುವಜನ ಸಂಘದ ನೂತನ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ರವಿಕುಮಾರ್, ವಾಸವಿ ಯುವಜನ ಸಂಘದ ಅಧ್ಯಕ್ಷÀ ನಾಗಪ್ರವೀಣ್, ನಿಕಟಪೂರ್ವ ಅಧ್ಯಕ್ಷÀ ರಾಜೇಂದ್ರ, ಯುವತಿಯರ ಸಂಘದ ಅಧ್ಯಕ್ಷೆ ಕುಸುಮಾ ಎಸ್.ರಾಜ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ವಾಸವಿ ಬಾಲಕರ ಸಂಘದ ಅಧ್ಯಕ್ಷ ದಿಶಾಂತ್, ಬಾಲಕಿಯರ ಸಂಘದ ಅದ್ಯಕ್ಷೆ ಶಿಲ್ಪಾ, ಜೆಸಿಐ ವಲಯ ಅಧಿಕಾರಿ ಕವಿತಾ ಎಂ. ಪ್ರಕಾಶ್ ಪಾಲ್ಗೊಂಡಿದ್ದರು,

ಬಿ.ಪಿ. ಕೃಷ್ಣಮೂರ್ತಿ ಶಂಖನಾದ ನುಡಿಸಿದರು, ಪಿ.ಎಸ್. ಚೇತನ್ ಸ್ವಾಗತಿಸಿದರು, ಕನ್ನಿಕಾ ನಾಗ್, ಕವಿತಾ, ಪೂಜಿತಾ ಸ್ವಾಗತಿಸಿದರು, ಬಾಲಾಜಿ, ವೈಶಾಖ್ ಮತ್ತು ಆದರ್ಶ ನಿರೂಪಿಸಿದರು, ನಾಗ ಶರಣ್ ವಂದಿಸಿದರು.

ಸಂಘದ ಪದಾಧಿಕಾರಿಗಳು

ಅಧ್ಯಕ್ಷರಾಗಿ ಕೆ.ಎನ್. ನಾಗಪ್ರವೀಣ್, ಉಪಾಧ್ಯಕ್ಷರಾಗಿ ಕೆ.ಪ್ರವೀಣ್, ವಿ.ವೈಶಾಖ್, ಕಾರ್ಯದರ್ಶಿಯಾಗಿ ಅರ್ಜುನ್ ಎನ್ ಗುಪ್ತ, ಸಹ ಕಾರ್ಯದರ್ಶಿ ಯಾಗಿ ಎಸ್. ಆದರ್ಶ, ಬಿ.ಎ. ತೇಜಸ್, ಖಜಾಂಚಿಯಾಗಿ ಪಿ.ಎಸ್. ಚೇತನ್, ಸಾಂಸ್ಕøತಿಕ ಕಾರ್ಯದರ್ಶಿ ಯಾಗಿ ಜಿ.ರಾಘವೇಂದ್ರ, ಕ್ರೀಡಾ ಕಾರ್ಯದರ್ಶಿಯಾಗಿ ಬಿ.ಯು. ಕಾರ್ತಿಕ, ಬಿ.ಎಸ್. ವಿನಯ್ ಮತ್ತು ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.

ವಾಸವಿ ಜಯಂತಿ ಅಂಗವಾಗಿ ಕುಶಾಲನಗರ ದೇವಾಲಯಗಳ ಒಕ್ಕೂಟದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲ ಅರ್ಪಿಸಿ ಪೂಜೆಯಲ್ಲಿ ಪಾಲ್ಗೊಂಡರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಗೌರವಾಧ್ಯಕ್ಷ ಕೆ.ಆರ್. ಶಿವಾನಂದನ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ವಿವಿಧ ದೇವಾಲಯಗಳ ಉಪಾಧ್ಯಕ್ಷರಾದ ವಿ.ಎನ್. ವಸಂತಕುಮಾರ್, ರಾಮದಾಸ್, ಖಜಾಂಚಿ ಎಸ್.ಕೆ. ಶ್ರೀನಿವಾಸರಾವ್, ಡಿ.ಆರ್. ಸೋಮಶೇಖರ್, ವಿವಿಧ ದೇವಾಲಯಗಳ ಪ್ರತಿನಿಧಿಗಳು ಇದ್ದರು.