ಮಡಿಕೇರಿ, ಏ. 25: ಕರ್ನಾಟಕ ವಿಧಾನಸಭೆಗೆ ಮೇ 12 ರಂದು ನಡೆಯಲಿರುವ ಚುನಾವಣೆ ಸಂಬಂಧ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇದುವರೆಗೆ ಸಲ್ಲಿಸಿರುವ 25 ಮಂದಿ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಇಂದು ನಡೆಯಿತು. ಈ ವೇಳೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 14 ಮಂದಿಯ ನಾಮಪತ್ರಗಳ ಪೈಕಿ ಓರ್ವ ಅಭ್ಯರ್ಥಿಯ ನಾಮಪತ್ರ ಸಮರ್ಪಕ ದಾಖಲೆಗಳಿಲ್ಲದೆ ತಿರಸ್ಕøತಗೊಂಡಿದೆ. ಅಲ್ಲದೆ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಾಪಂಡ ಎಂ. ಮುತ್ತಪ್ಪ ಅವರ ಅರ್ಜಿ ಒಂದು ಜತೆ ತಿರಸ್ಕøತಗೊಂಡಿದ್ದು, ಅವರು ಪಕ್ಷೇತರರಾಗಿ ಸಲ್ಲಿಸಿರುವದು ಸ್ವೀಕೃತಗೊಂಡಿದೆ.

ಕುಶಾಲನಗರದ ಅಭ್ಯರ್ಥಿ ವೆಂಕಟೇಶ್ ಬಿ. ಗೌಡ ಉಮೇದುವಾರಿಕೆ ತಿರಸ್ಕøತಗೊಳ್ಳುವದ ರೊಂದಿಗೆ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 14 ಮಂದಿಯ ಪೈಕಿ ಇದೀಗ 13 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಅಂತೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಎಲ್ಲಾ 11 ನಾಮಪತ್ರಗಳು ಸಿಂಧುವಿದ್ದು, ಜಿಲ್ಲೆಯ ಎರಡು ಕ್ಷೇತ್ರಗಳಿಂದ ಒಟ್ಟು 24 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ.ಮಡಿಕೇರಿ ಕ್ಷೇತ್ರ : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಂದ ಉಮೇದುವಾರಿಕೆ ಸಲ್ಲಿಸಿರುವ ಬಿಜೆಪಿಯ ಎಂ.ಪಿ. ಅಪ್ಪಚ್ಚುರಂಜನ್, ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕೆ.ಪಿ. ಚಂದ್ರಕಲಾ, ಜಾತ್ಯತೀತ ಜನತಾದಳ ಅಭ್ಯರ್ಥಿ ಬಿ.ಎ. ಜೀವಿಜಯ ಅವರುಗಳ ಉಮೇದುವಾರಿಕೆ ಸಿಂಧುಗೊಂಡಿವೆ. ಉಳಿದಂತೆ ಪಕ್ಷೇತರರಾಗಿ ಕಣದಲ್ಲಿರುವ ನಾಪಂಡ ಎಂ. ಮುತ್ತಪ್ಪ, ಸಿ.ಜೆ. ಭಾರ್ಗವ, ಹೇಮಂತ್‍ಕುಮಾರ್, ರಶೀದಾ ಬೇಗಂ, ಕಿಶನ್ ಉತ್ತಪ್ಪ, ಕೆ.ಪಿ. ರಾಜು, ಯಂ. ಖಲೀಲ್, ಮಹಮ್ಮದ್ ಹನೀಫ್, ಪಿ.ಎಸ್. ಯಡೂರಪ್ಪ ಹಾಗೂ ಬಿ.ಎಂ. ತಿಮ್ಮಯ್ಯ ಅವರುಗಳ ನಾಮಪತ್ರ ಸ್ವೀಕೃತಗೊಂಡಿವೆ.

ವೀರಾಜಪೇಟೆ ಕ್ಷೇತ್ರ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಹಾಗೂ ಜೆಡಿಎಸ್‍ನಿಂದ ಸಂಕೇತ್ ಪೂವಯ್ಯ ಅವರುಗಳ ನಾಮಪತ್ರಗಳು ಕ್ರಮಬದ್ಧಗೊಂಡಿವೆ. ಅಲ್ಲದೆ ಇತರ ಅಭ್ಯರ್ಥಿಗಳಾದ ಹೆಚ್.ಡಿ. ಬಸವರಾಜು, ಕದ್ದಣಿಯಂಡ ಹರೀಶ್ ಬೋಪಣ್ಣ, ಮಾಂಗೇರ ಪದ್ಮಿನಿ ಪೊನ್ನಪ್ಪ ಸೇರಿದಂತೆ ಅಚ್ಚಪಂಡ ಗಿರಿ ಉತ್ತಪ್ಪ, ಪಿ.ಎಸ್. ಮುತ್ತ, ಎಂ.ಕೆ. ನಂಜಪ್ಪ, ಫೈಜಲ್, ಹೆಚ್.ಡಿ. ದೊಡ್ಡಯ್ಯ ಇವರುಗಳ ಉಮೇದುವಾರಿಕೆ ಸಿಂಧುಗೊಂಡಿವೆ.

ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ಪರಿಶೀಲನಾ ಕಾರ್ಯವು

(ಮೊದಲ ಪುಟದಿಂದ) ಎರಡು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 14 ಮಂದಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಒಬ್ಬರ (ವೆಂಕಟೇಶ ಬಿ.ಗೌಡ) ನಾಮಪತ್ರ ತಿರಸ್ಕøತಗೊಂಡಿದ್ದು, ಉಳಿದಂತೆ 13 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ರಮೇಶ್ ಪಿ.ಕೊನರೆಡ್ಡಿ ಅವರು ತಿಳಿಸಿದ್ದಾರೆ.

ಹಾಗೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 11 ಮಂದಿ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಎಲ್ಲರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆ. ರಾಜು ಅವರು ಮಾಹಿತಿ ನೀಡಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ತಾ. 27 ಕೊನೆಯ ದಿನವಾಗಿದೆ. ಮೇ 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ. ಮೇ 15 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.