ಮಡಿಕೇರಿ, ಏ. 25: ಚುನಾವಣೆಯ ಭರಾಟೆಯ ನಡುವೆ ಮಡಿಕೇರಿ ನಗರಸಭಾ ವ್ಯಾಪ್ತಿಯ ದೇಚೂರು ಕಸದ ಕೊಂಪೆಯಾಗಿ ಪರಿಣಮಿಸಿದೆ. ಈ ವಿಭಾಗದಲ್ಲಿ ಕಳೆದ ಹಲವು ದಿನಗಳಿಂದ ಕಸವನ್ನು ಕೆಲವು ತಿಳಿಗೇಡಿಗಳು ಈ ಹಿಂದೆ ಕಸದ ತೊಟ್ಟಿ ಇದ್ದ ಜಾಗದಲ್ಲಿ ಹಾಕಿರುವ ದೃಶ್ಯ ಗೋಚರಿಸಿದೆ.

ಈ ಸ್ಥಳದಲ್ಲಿ ಕಸ ರಾಶಿಯಾಗಿ ಹರಡಿಕೊಂಡಿದ್ದು, ರೋಗ-ರುಜಿನಗಳು ಹರಡುವ ಸಂಭವವಿದೆ. ಈ ಬಗ್ಗೆ ಸಂಬಂಧಿಸಿದ ನಗರಸಭೆಯವರು ಗಮನ ಹರಿಸಬೇಕೆಂದು ಸ್ಥಳೀಯರಾದ ಪಟ್ರಪಂಡ ಶಂಭು ಸೋಮಣ್ಣ ಅವರು ಪತ್ರಿಕೆಯ ಮೂಲಕ ಆಗ್ರಹಿಸಿದ್ದಾರೆ.