ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ
ಜೋದ್ಪುರ, ಏ. 25: ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋದ್ಪುರ ನ್ಯಾಯಾಲಯ ಶಿಕ್ಷೆ ಪ್ರಮಾಣ ಘೋಷಣೆ ಮಾಡಿದ್ದು, ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇಂದು ಪ್ರಕರಣ ಸಂಬಂಧ ತೀರ್ಪು ನೀಡಿದ್ದ ಜೋದ್ಪುರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ್ ಶರ್ಮಾ ಅವರು ಪ್ರಮುಖ ದೋಷಿ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ನೀಡಿದೆ. ಅಂತೆಯೇ ಪ್ರಕರಣದ ಇತರ ಇಬ್ಬರು ದೋಷಿಗಳಾದ ಶಿಲ್ಪಿ ಮತ್ತು ಶರದ್ ಅವರಿಗೆ ತಲಾ 20 ವರ್ಷ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಅತ್ತ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ನ್ಯಾಯಾಧೀಶರನ್ನು ಆಲಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಆಘಾತದಿಂದ ಕುಸಿದು ಬಿದ್ದರು. ಬಳಿಕ ಸಹಾಯಕರ ನೆರವಿನಿಂದ ಮೇಲೆದ್ದ ಅಸರಾಂ ಬಾಪು, ತಿನ್ನುತ್ತೇನೆ, ಕುಡಿಯುತ್ತೇನೆ ಮತ್ತು ಸಂತೋಷ ಪಡುತ್ತೇನೆ ಏಕೆಂದರೆ ನಾನು ನನ್ನ ಶೇಷ ಜೀವನವನ್ನು ಇಲ್ಲೇ ಕಳೆಯಬೇಕಾಗಿದೆ ಎಂದು ಭಾವುಕರಾಗಿ ಹೇಳಿದರು.
ಉಗ್ರರಿಂದ ಪಿಡಿಪಿ ಮುಖಂಡನ ಹತ್ಯೆ
ಜಮ್ಮು-ಕಾಶ್ಮೀರ, ಏ. 25: ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಮುಖಂಡನೋರ್ವರ ಮೇಲೆ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಪಟೇಲ್ ಧಾಳಿಗೀಡಾಗಿದ್ದು ಅವರು ಯಾದರ್ನಿಂದ ಪುಲ್ವಾರಕ್ಕೆ ಬರುವ ಮಾರ್ಗದಲ್ಲಿ ಈ ಧಾಳಿ ನಡೆದಿದೆ. ರಾಜ್ಪೋರಾದಲ್ಲಿ ಉಗ್ರರು ಪಟೇಲ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆ ವೇಳೆ ಪಟೇಲ್ ಅವರೊಡನಿದ್ದ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಸಹ ತೀವ್ರ ಸ್ವರೂಪದ ಗಾಯಗಳಾಗಿದೆ. ಧಾಳಿ ನಡೆಸಿದ್ದ ಉಗ್ರರು ಸ್ಥಳದಿಂಡ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಹರ್ಷಿಕಾಗೆ ಕಾಸ್ಟಿಂಗ್ ಕೌಚ್ ಅನುಭವ
ಬೆಂಗಳೂರು, ಏ. 25: ತೆಲುಗು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಗಿತ್ತು, ಇದೇ ಕಾರಣಕ್ಕೆ ತಾನು ಬಾಲಿವುಡ್ನ ದೊಡ್ಡ ದೊಡ್ಡ ಚಿತ್ರಗಳನ್ನು ಕೈ ಬಿಟ್ಟಿದ್ದೆ ಎಂದು ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ತಮ್ಮ ಅಭಿನಯದ ಚಿಟ್ಟೆ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಹರ್ಷಿಕಾ, ಬಾಲಿವುಡ್ನಲ್ಲಿ ತಾನು ಎರಡು ದೊಡ್ಡ ಸಿನೆಮಾ ಮಾಡಬೇಕಿತ್ತು. ಆದರೆ ಕಾಸ್ಟಿಂಗ್ ಕೌಚ್ಗಾಗಿ ಬೇಡಿಕೆ ಇಟ್ಟಾಗ ಅದನ್ನು ತೊರೆದಿದ್ದೆ ಎಂದು ಹೇಳಿದ್ದಾರೆ. ಕನ್ನಡ, ಮಲಯಾಳಂ, ತೆಲುಗು ಚಿತ್ರರಂಗದಲ್ಲಿ ಇಂತಹ ಅನುಭವವಾಗಿರಲಿಲ್ಲ, ಆದರೆ ಬಾಲಿವುಡ್ ಪ್ರವೇಶಕ್ಕೆ ಅವಕಾಶ ಸಿಕ್ಕಾಗ ಇಂತಹ ಕೆಟ್ಟ ಅನುಭವಾಗಿತ್ತು. ಕಾಸ್ಟಿಂಗ್ ಕೌಚ್ನಿಂದಾಗಿ ಎರಡು ಪ್ರಮುಖ ಬಾಲಿವುಡ್ ಚಿತ್ರಗಳನ್ನು ಕೈ ಬಿಟ್ಟಿದ್ದೆ. ಯಾರಾದರೂ ಈ ಬಗ್ಗೆ ಕೇಳಿದಾಗ ವಯಸ್ಸಿನ ಅಂತರದಿಂದಾಗಿ ಆ ಚಿತ್ರ ಕೈಬಿಟ್ಟಿದ್ದಾಗಿ ಸಬೂಬು ಹೇಳುತ್ತಿದ್ದೆ. ಈ ಬಗ್ಗೆ ಯಾರಾದರು ಪ್ರಶ್ನೆ ಕೇಳಿದಾಗ ಮುಜುಗರಕ್ಕೊಳಗಾಗುತ್ತಿದೆ ಎಂದು ಹರ್ಷಿಕಾ ಹೇಳಿದ್ದಾರೆ. ಇದೇ ವಿಚಾರವಾಗಿ ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಚುಟುಕಾಗಿ ಪ್ರತಿಕ್ರಿಯೆ ನೀಡಿರುವ ಹರ್ಷಿಕಾ ಯಾರಾದರೂ ನಿಮಗೆ ಇಷ್ಟವಿಲ್ಲದ್ದನ್ನು ಕೇಳಿದರೆ, ಇಲ್ಲ ಎಂದು ಹೇಳಿ. ರೆಬೆಲ್ ಆಗಿ ಜೀವನ ಸಾಗಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಜನಾಧರ್Àನ ರೆಡ್ಡಿ ಸ್ಟಾರ್ ಪ್ರಚಾರಕರಲ್ಲ
ಹುಬ್ಬಳ್ಳಿ, ಏ. 25: ಮಾಜಿ ಸಚಿವ ಜನಾಧರ್Àನ ರೆಡ್ಡಿ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರು ಎಂದು ತಾವು ಎಲ್ಲಿಯೂ ಕರೆದಿಲ್ಲ ಎಂದು ಬಿಜೆಪಿ ವಕ್ತಾರ ಡಾ. ವಾಮನಾಚಾರ್ಯ ಹೇಳಿದ್ದಾರೆ. ಜನಾರ್ದನ ರೆಡ್ಡಿಯನ್ನು ತಾವು ಎಲ್ಲಿಯೂ ಪ್ರಚಾರಕ್ಕೆ ಕರೆದಿಲ್ಲ. ಅವರೇನು ಗಲ್ಲು ಶಿಕ್ಷೆಗೆ ಗುರಿಯಾಗಿಲ್ಲ. ಅವರು ಸಹ ಸಾಮಾನ್ಯ ಕಾರ್ಯಕರ್ತರಾಗಿ ಪ್ರಚಾರ ಮಾಡಲಿದ್ದಾರೆ ಎಂದು ವಾಮನಾಚಾರ್ಯ ಹೇಳಿದರು. ಜನಾರ್ದನ ರೆಡ್ಡಿ ಪ್ರಚಾರ ಮಾಡುವದರಿಂದ ತಮ್ಮ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಬಿಜೆಪಿ ಸಿಎಂ ಅಭ್ಯರ್ಥಿ ಯಡಿಯೂರಪ್ಪನವರು ಹೇಳಿಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ನಮ್ಮ ನಾಯಕರು ಶ್ರೀರಾಮುಲು ಹೊರತು, ಜನಾರ್ದನ ರೆಡ್ಡಿ ಅಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ವಾಮಾನಾಚಾರ್ಯ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ಆ ಹಣವನ್ನು ಸದ್ಬಳಕೆ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಐದು ವರ್ಷದಿಂದ ರಾಜಕೀಯ ಬಿಟ್ಟು ಅಭಿವೃದ್ಧಿ ಮಾತ್ರ ಕಂಡಿಲ್ಲ ಎಂದರು.
ಮಮತಾ ವಿರುದ್ಧ ವಿವಾದಾತ್ಮಕ ಹೇಳಿಕೆ
ಉತ್ತರಪ್ರದೇಶ, ಏ. 25: ವಿವಾದಾತ್ಮಕ ಹೇಳಿಕೆಗಳನ್ನು ತಡೆಗಟ್ಟಿ ಎಂದು ಪ್ರಧಾನಿ ನರೇಂದ್ರಮೋದಿ ತನ್ನ ಪಕ್ಷದ ನಾಯಕರಿಗೆ ಹೇಳಿದ ಮಾರನೇ ದಿನವೇ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರಸಿಂಗ್ ಮಮತಾ ಬ್ಯಾನರ್ಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುರೇಂದ್ರಸಿಂಗ್, ಕಾಂಗ್ರೆಸ್ ಪಕ್ಷವನ್ನು ರಾವಣನಿಗೆ ಹೋಲಿಕೆ ಮಾಡಿದ್ದು, ಮಮತಾ ಬ್ಯಾನರ್ಜಿಯನ್ನು ಶೂರ್ಪನಖಿ ಎಂದು ಕರೆದಿದ್ದಾರೆ. ಬೈರಿಯಾದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಸುರೇಂದ್ರಸಿಂಗ್ ಮಮತಾ ಬ್ಯಾನರ್ಜಿ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಭುಗಿಲೇಳುವ ಸಾಧ್ಯತೆ ಇದೆ. ಬಿಜೆಪಿ ಆಡಳಿತ ವಿರುವ ಎಲ್ಲಾ ರಾಜ್ಯಗಳ ಭಯೋತ್ಪಾದಕರು ಪಶ್ಚಿಮ ಬಂಗಾಳಕ್ಕೆ ಬರುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಪಶ್ಚಿಮ ಬಂಗಾಳ ಕೂಡಾ ಒಂದು ದಿನ ಜಮ್ಮು ಕಾಶ್ಮೀರವಾಗಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.
ಅಶೋಕ್ ಖೇಣಿ ಅಮೇರಿಕಾ ಪ್ರಜೆ !
ಬೀದರ್, ಏ. 25: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ನಾಮಪತ್ರ ಅಂಗೀಕಾರ ಮಾಡದಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಶೋಕ್ ಖೇಣಿ ಭಾರತದ ಪ್ರಜೆ ಅಲ್ಲ. ಅವರು ಅಮೇರಿಕಾದ ಪ್ರಜೆಯಾಗಿದ್ದು, ಸರ್ಕಾರದ ಹಲವು ಯೋಜನೆಗಳಲ್ಲಿ ಗುತ್ತಿಗೆ ಪಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೂರು ದಾಖಲಾದ ಹಿನ್ನೆಲೆ ಖೇಣಿ ನಾಮಪತ್ರ ಅಂಗೀಕಾರಕ್ಕೆ ಆಯೋಗದ ಅಧಿಕಾರಿಗಳು ತಡೆ ನೀಡಿದ್ದಾರೆ. ದೂರಿನ ಸಂಬಂಧ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. 2013ರಲ್ಲಿ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷದ ಅಡಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿದು ಗೆದ್ದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳಿಗೆ ವೋಟ್ ಹಾಕಿದ್ದ ಖೇಣಿ ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.
3 ಮಕ್ಕಳು ಸೇರಿ ನಾಲ್ವರು ನೀರು ಪಾಲು
ಚಿಕ್ಕಬಳ್ಳಾಪುರ, ಏ. 25: ಜಲಾಶಯದಲ್ಲಿ ಮುಳುಗಿ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ. ಉರಿಯಾ (12), ಸಾಧ್ (7), ಸಭಾ (13) ಮತ್ತು ಚಾಲಕ ಆರೀಫ್ (23) ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಬುಕ್ಕಸಂದ್ರ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ಕಾರಿನಲ್ಲಿ ನಂದಿಬೆಟ್ಟ ಪ್ರವಾಸ ಮುಗಿಸಿ ಶ್ರೀನಿವಾಸ ಸಾಗರಕ್ಕೆ ಬಂದಿದ್ದರು. ಮಕ್ಕಳು ಆಟವಾಡಲು ಜಲಾಶಯಕ್ಕೆ ಇಳಿದಿದ್ದರು. ಆಟವಾಡುತ್ತಿದ್ದಾಗಲೇ ಮಕ್ಕಳು ಮುಳುಗಿದ್ದಾರೆ. ಇದನ್ನು ಕಂಡ ಚಾಲಕ ಆರೀಫ್ ರಕ್ಷಣೆಗೆಂದು ಅವರು ಜಲಾಶಯಕ್ಕೆ ಇಳಿದಿದ್ದಾರೆ. ದುರದೃಷ್ಟವಶಾತ್ ಆರೀಫ್ ಸೇರಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೆÇಲೀಸರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮತ್ತಿಬ್ಬರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.