ವೀರಾಜಪೇಟೆ, ಏ. 26: ಮುಂಗಾರು ಮಳೆ ಚಿತ್ರದ ಖ್ಯಾತ ನಟಿ ಪೂಜಾಗಾಂಧಿ ಅವರು ತಾ. 27 ರಂದು (ಇಂದು) ಜೆ.ಡಿ.ಎಸ್.ಪಕ್ಷದ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಪಕ್ಷದ ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ತಿಳಿಸಿದ್ದಾರೆ. ವೀರಾಜಪೇಟೆ ಮುಖ್ಯ ರಸ್ತೆಯ ಗಡಿಯಾರ ಕಂಬದಿಂದ ಬೆಳಿಗ್ಗೆ 10ಗಂಟೆಗೆ ಚುನಾವಣಾ ಪ್ರಚಾರ ಪ್ರಾರಂಭಿಸಲಿರುವದಾಗಿ ಮಂಜುನಾಥ್ ತಿಳಿಸಿದ್ದಾರೆ.