ನಾಪೆÇೀಕ್ಲು, ಏ. 26: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹನ್ನೊಂದನೇ ದಿನದ ಪಂದ್ಯಾಟದಲ್ಲಿ 15 ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಬುಧವಾರ ನಡೆದ ಪಂದ್ಯಾಟದಲ್ಲಿ ಪುಲಿಯಂಡ, ಮಂಡೇಡ, ಅರೆಯಡ, ಚೆಯ್ಯಂಡ, ಮಣವಟ್ಟಿರ, ಚೇನಂಡ, ತಾಪಂಡ, ಮಂಡೀರ (ನೆಲಜಿ), ಮುಂಡ್ಯೋಳಂಡ, ಕೇಲೇಟಿರ, ಮುದ್ದಿಯಡ, ಕನ್ನಂಡ, ಪಟ್ಟಡ, ಅಪ್ಪಚ್ಚಿರ ತಂಡಗಳು ಮುಂದಿನ ಸುತ್ತು ಪ್ರವೇಶಿವೆ.
ಪುಲಿಯಂಡ ಮತ್ತು ತೆನ್ನಿರ ತಂಡಗಳ ನಡುವಿನ ಪಂದ್ಯದಲ್ಲಿ ಪುಲಿಯಂಡ ತಂಡವು ತೆನ್ನಿರ ತಂಡವನ್ನು 5-0 ಗೋಲಿನಿಂದ ಮಣಿಸಿತು. ಪುಲಿಯಂಡ ತಂಡದ ಪರ ತಿಮ್ಮಯ್ಯ ಮೂರು, ಪೆÇನ್ನಣ್ಣ ಹಾಗೂ ಧನುಶ್ ಮುದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಮಂಡೇಡ ಮತ್ತು ಚೊಟ್ಟೆಯಂಡಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಡ ತಂಡವು ಚೊಟ್ಟೆಯಂಡಮಾಡ ತಂಡವನ್ನು 2-0 ಗೋಲಿನಿಂದ ಮಣಿಸಿತು. ಮಂಡೇಡ ತಂಡದ ಪರ ಗಿರೀಶ್ ಕಾವೇರಪ್ಪ ಹಾಗೂ ವಿನೋದ್ ಚಂಗಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಅರೆಯಡ ಮತ್ತು ಕೇಳಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಅರೆಯಡ ತಂಡವು ಕೇಳಪಂಡ ತಂಡವನ್ನು 4-1 ಗೋಲಿನಿಂದ ಮಣಿಸಿತು. ಅರೆಯಡ ತಂಡದ ಪರ ಸನ್ನು ಚಿಣ್ಣಪ್ಪ ಮೂರು, ಗಣೇಶ್ ಬೆಳ್ಯಪ್ಪ ಒಂದು ಗೋಲು ದಾಖಲಿಸಿದರು. ತೀತರಮಾಡ ಮತ್ತು ಚೆಯ್ಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಯ್ಯಂಡ ತಂಡವು ತೀತರಮಾಡ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಚೆಯ್ಯಂಡ ತಂಡದ ಪರ ಶಂಕರಿ ಎರಡು, ಮಂಜು ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.
ಮಣವಟ್ಟಿರ ಮತ್ತು ಬಯವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಣವಟ್ಟಿರ ತಂಡವು ಬಯವಂಡ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು. ಮಣವಟ್ಟಿರ ತಂಡದ ಪರ ಆಶಿಕ್, ಮಂಜು ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಚೇನಂಡ ಮತ್ತು ತೀತಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೇನಂಡ ತಂಡವು ತೀತಿಮಾಡ ತಂಡವನ್ನು 3-0 ಗೋಲಿನಿಂದ ಮಣಿಸಿತು. ಚೇನಂಡ ತಂಡದ ಪರ ಸಚಿನ್, ಮಾದಪ್ಪ, ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ತಾಪಂಡ ಮತ್ತು ತಿರೋಡಿರ ತಂಡಗಳ ನಡುವಿನ ಪಂದ್ಯದಲ್ಲಿ ತಾಪಂಡ ತಂಡವು ತಿರೋಡಿರ ತಂಡವನ್ನು 2-0 ಗೋಲಿನಿಂದ ಮಣಿಸಿತು. ತಾಪಂಡ ತಂಡದ ಪರ ಶಿವಾನಿ, ಸಂಜು ತಲಾ ಒಂದೊಂದು ಗೋಲು ದಾಖಲಿಸಿದರು. ಅಚ್ಚಪಂಡ ಮತ್ತು ಮಂಡೀರ (ನೆಲಜಿ) ತಂಡಗಳ ನಡುವಿನ ಪಂದ್ಯದಲ್ಲಿ ಮಂಡೀರ ತಂಡವು ಅಚ್ಚಪಂಡ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು.
ಮಂಡೀರ ತಂಡದ ಪರ ತಶ್ವಿನ್ ಎರಡು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ತಂಬುಕುತ್ತಿರ ಮತ್ತು ಮುಂಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡ್ಯೋಳಂಡ ತಂಡವು ತಂಬುಕುತ್ತಿರ ತಂಡವನ್ನು 2-0 ಗೋಲಿನಿಂದ ಮಣಿಸಿತು. ಮುಂಡ್ಯೋಳಂಡ ತಂಡದ ಪರ ಬೋಪಯ್ಯ ಎರಡು ಗೋಲು ದಾಖಲಿಸಿದರು. ಕೇಲೇಟಿರ ಮತ್ತು ಬಾಚಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೇಲೇಟಿರ ತಂಡವು ಬಾಚಮಂಡ ತಂಡವನ್ನು 4-0 ಗೋಲಿನಿಂದ ಮಣಿಸಿತು. ತಂಡದ ಪರ ಕವನ್ ಕಾಳಪ್ಪ ಎರಡು, ಚಮನ್ ಚಂಗಪ್ಪ, ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಅಪ್ಪನೆರವಂಡ ಮತ್ತು ಮುದ್ದಿಯಡ ತಂಡಗಳ ನಡುವಿನ ಪಂದ್ಯದಲ್ಲಿ ಮುದ್ದಿಯಡ ತಂಡವು ಅಪ್ಪನೆರವಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ಮುದ್ದಿಯಡ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು. ಕಾಡ್ಯಮಡ ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ ತಂಡವು ಕಾಡ್ಯಮಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ತಂಡದ ಪರ ಅಲನ್ ಒಂದು ಗೋಲು ದಾಖಲಿಸಿದರು. ಅಲ್ಲಪಿರ ಮತ್ತು ಪಟ್ಟಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಡ ತಂಡವು ಅಲ್ಲಪಿರ ತಂಡವನ್ನು 3-0 ಗೋಲಿನ ಅಂತರದಿಂದ ಮಣಿಸಿತು. ಪಟ್ಟಡ ತಂಡದ ಪರ ಸತೀಶ್ ಎರಡು, ಬಿಪಿನ್ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಅಪ್ಪಚ್ಚಿರ ಮತ್ತು ಚಿಂಡಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಅಪ್ಪಚ್ಚಿರ ತಂಡವು ಚಿಂಡಮಾಡ ತಂಡವನ್ನು 5-4 ಗೋಲಿನಿಂದ ಮಣಿಸಿತು.