ಮಡಿಕೇರಿ, ಏ. 26: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ದಂಬೆಕೋಡಿ ಹಾಗೂ ಊರುಬೈಲು ತಂಡಗಳು ಪ್ರಿಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ 8 ವಿಕೆಟ್‍ಗೆ 78 ರನ್ ಗಳಿಸಿದರೆ, ಹುದೇರಿ ತಂಡ 3 ವಿಕೆಟ್‍ಗೆ 59 ರನ್ ಗಳಿಸಿ 19 ರನ್‍ಗಳ ಅಂತರದಿಂದ ಸೋಲನುಭವಿಸಿತು. ಹುದೇರಿ ತ್ರಿಶೂಲ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಊರುಬೈಲು ತಂಡ 4 ವಿಕೆಟ್‍ಗೆ 85 ರನ್ ಗಳಿಸಿದರೆ, ಬಳ್ಳಡ್ಕ ತಂಡ 4 ವಿಕೆಟ್‍ಗೆ 65 ರನ್ ಗಳಿಸಿ 20 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬಳ್ಳಡ್ಕ ತೀರ್ಥವನ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಬಾಡನ ತಂಡ 2 ವಿಕೆಟ್‍ಗೆ 80 ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ 3 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿ ಡ್ರಾ ಮಾಡಿಕೊಂಡಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯ ಅಂತಿಮ ತೀರ್ಮಾನಕ್ಕೆ ಸೂಪರ್ ಓವರ್ ಅವಕಾಶ ನೀಡಲಾಯಿತು. ಇದರಲ್ಲಿ ಬಾಡನ ತಂಡ ಜಯಗಳಿಸಿತು. ಕಲ್ಲುಮುಟ್ಲು ಚೇತನ್ (ಚಿಂತು) ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಕಾಡುಪಂಜ ತಂಡ 3 ವಿಕೆಟ್‍ಗೆ ಭರ್ಜರಿ 120 ರನ್ ಕಲೆಹಾಕಿದರೆ ಉತ್ತರವಾಗಿ ಆಡಿದ ಬೈಲೋಳಿ ತಂಡ 3 ವಿಕೆಟ್‍ಗೆ 70 ರನ್ ಮಾತ್ರ ಗಳಿಸಿ 50 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬೈಲೋಳಿ ಕರುಂಬಯ್ಯ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕಾಡುಪಂಜ ಸುನಿಲ್ 53 ರನ್ ಗಳಿಸಿ ಗಮನ ಸೆಳೆದರು. ಮೊಟ್ಟನ ತಂಡ 8 ವಿಕೆಟ್‍ಗೆ 51 ರನ್ ಗಳಿಸಿದರೆ, ದಂಬೆಕೋಡಿ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಮೊಟ್ಟನ ಕೀರ್ತನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಪೊಕ್ಕುಳಂಡ್ರ ತಂಡ 9 ವಿಕೆಟ್‍ಗೆ 50 ರನ್ ಗಳಿಸಿದರೆ, ಬಿಳಿಯಂಡ್ರ ತಂಡ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಪೊಕ್ಕುಳಂಡ್ರ ರಕ್ಷಿತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಬಾಡನ ತಂಡ 5 ವಿಕೆಟ್‍ಗೆ 57 ರನ್ ಗಳಿಸಿದರೆ, ದೇವಾಯಿರ ತಂಡ 4 ವಿಕೆಟ್‍ಗೆ 55 ರನ್ ಕೇವಲ 2 ರನ್‍ಗಳ ಅಂತರದಿಂದ ಸೋಲನುಭವಿಸಿತು. ದೇವಾಯಿರ ಯತಿನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕಾಡುಪಂಜ ತಂಡ 4 ವಿಕೆಟ್‍ಗೆ 76 ರನ್ ಗಳಿಸಿದರೆ, ಊರುಬೈಲು ತಂಡ 2 ವಿಕೆಟ್ ನಷ್ಟದಲ್ಲಿ 80 ರನ್ ಗಳಿಸಿ ಗೆಲುವು ಸಾಧಿಸಿತು. ಕಾಡುಪಂಜ ಮನೋಜ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಗುತ್ತಿಮುಂಡನ ತಂಡ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಕೇವಲ 27 ರನ್ ಗಳಿಸಿದರೆ, ಪಾಕ ಮುಕ್ಕಾಟಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿಸಾಧಿಸಿತು. ಗುತ್ತಿಮುಂಡನ ದಕ್ಷಿತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಮತ್ತೊಂದು ಪಂದ್ಯದಲ್ಲಿ ಊರುಬೈಲು ತಂಡ 3 ವಿಕೆಟ್‍ಗೆ 97 ರನ್ ಗಳಿಸಿದರೆ, ಬಿಳಿಯಂಡ್ರ ತಂಡ 3 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿ 19 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬಿಳಿಯಂಡ್ರ ದಿಲನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಬಾಡನ ತಂಡ 7 ವಿಕೆಟ್‍ಗೆ 42 ರನ್ ಗಳಿಸಿದರೆ, ದಂಬೆಕೋಡಿ ತಂಡ 2 ವಿಕೆಟ್ ನಷ್ಟದಲ್ಲಿ 48 ರನ್ ಗಳಿಸಿ ಜಯ ಸಂಪಾದಿಸಿತು. ಬಾಡನ ಕಿರಣ್ ಕಾಳಪ್ಪ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.