ಗೋಣಿಕೊಪ್ಪಲು. ಏ.26: ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಗೋಣಿಕೊಪ್ಪ ನಗರಕ್ಕೆ ಆಗಮಿಸುವ ಹಿನೆÀ್ನಲೆಯಲ್ಲಿ ಕಾಂಗ್ರೆಸ್‍ನ ನಾಯಕರು ಅದ್ಧೂರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿಗೆ ರಾಹುಲ್‍ಗಾಂಧಿಯವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸ್ಥಳೀಯ ಕಾವೇರಿ ಕಾಲೇಜು ಆವರಣದಿಂದ ಬಹಿರಂಗ ಸಭೆಯ ವೇದಿಕೆಯವರೆಗೂ ‘ಡಿಜೋನ್’ ನಿರ್ಮಾಣ ಮಾಡಲಾಗಿದೆ. ಬೃಹತ್ ವೇದಿಕೆ ನಿರ್ಮಾಣಗೊಂಡಿದ್ದು, 8 ಸಾವಿರ ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ರಾಹುಲ್ ಗಾಂಧಿ ಪ್ರಚಾರ ಭಾಷಣ ಮಾಡುವ ವೇದಿಕೆಯಲ್ಲಿ 60 ಮಂದಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ, ಕಾಂಗ್ರೆಸ್ ಮುಖಂಡರುಗಳು ಕುಳಿತುಕೊಳ್ಳುವ ವಿಶೇಷ ವೇದಿಕೆ ನಿರ್ಮಾಣಗೊಂಡಿದೆ. ಕಾರ್ಯಕ್ರಮ ತಡವಾಗುವ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.ಮಳೆಯ ಮುನ್ಸೂಚನೆ ಹಿನೆÀ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವಾಟರ್ ಪ್ರೂಫ್ ಶೀಟ್ ಅನ್ನು ಅಳವಡಿಸಿ ವೇದಿಕೆ ನಿರ್ಮಾಣ ಮಾಡಲಾಗಿದೆ.ತಾ. 27ರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ರಾಹುಲ್‍ಗಾಂಧಿ ಗೋಣಿಕೊಪ್ಪಲುವಿನ ದಸರಾ ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ (ಮೊದಲ ಪುಟದಿಂದ) ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದು ಕಾವೇರಿ ಕಾಲೇಜು ಮೈದಾನಕ್ಕೆ ವಿಶೇಷ ಹೆಲಿಕಾಪ್ಟರ್‍ನಲ್ಲಿ ಆಗಮಿಸಲಿದ್ದಾರೆ. ಕಾಲೇಜು ಮೈದಾನದಲ್ಲಿ ಎರಡು ವಿಶೇಷ ಹೆಲಿಕಾಪ್ಟರ್ ಇಳಿಯಲು ಹೆಲಿಪ್ಯಾಡ್ ನಿರ್ಮಾಣವಾಗಿದ್ದು ಒಂದು ಹೆಲಿಕಾಪ್ಟರ್‍ನಲ್ಲಿ ರಾಹುಲ್ ಗಾಂಧಿ ಆಗಮಿಸಲಿದ್ದು ಮತ್ತೊಂದು ಹೆಲಿಕಾಪ್ಟರ್‍ನಲ್ಲಿ ಭದ್ರತಾ ಸಿಬ್ಬಂದಿಗಳು ಆಗಮಿಸಲಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ರಾಹುಲ್ ಗಾಂಧಿ ಸಂಚರಿಸುವ ಮಾರ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಹಾಗೂ ಸೈರನ್ ಇರುವ ವಾಹನಗಳು ಸಂಚರಿಸುವದಿಲ್ಲ. ಯಾವದೇ ಸರ್ಕಾರಿ ವಾಹನದಲ್ಲಿ ರಾಹುಲ್ ಗಾಂಧಿ ಪ್ರಯಾಣ ಮಾಡುವಂತಿಲ್ಲ. ಬದಲಾಗಿ ಖಾಸಗಿ ವಾಹನದಲ್ಲೆ ಮೈದಾನಕ್ಕೆ ಆಗಮಿಸಲಿದ್ದಾರೆ.

ರಾಹುಲ್ ಗಾಂಧಿ ಆಗಮನದ ಹಿನೆÀ್ನಲೆಯಲ್ಲಿ ಎಸ್‍ಪಿಜಿ ತಂಡ ಈಗಾಗಲೇ ನಗರದಲ್ಲಿ ಮೊಕ್ಕಾಂ ಹೂಡಿದ್ದು, ಬೆಳಿಗ್ಗೆಯಿಂದಲೇ ರಾಹುಲ್ ಗಾಂಧಿ ಪ್ರಚಾರ ಭಾಷಣ ಮಾಡುವ ವೇದಿಕೆಯನ್ನು ಸುಪರ್ಧಿಗೆ ತೆಗೆದುಕೊಳ್ಳಲಿದ್ದಾರೆ. ಪ್ರಚಾರ ಭಾಷಣ ಮಾಡುವ ವೇದಿಕೆಯಿಂದ ನೂರು ಮೀ. ದೂರದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪುತ್ತಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.

ರಾಹುಲ್‍ಗಾಂಧಿ ಭೇಟಿ ಹಿನೆÀ್ನಲೆಯಲ್ಲಿ ಮೈದಾನಕ್ಕೆ ಮೈಸೂರಿನ ಐಜಿಪಿ ಹಾಗೂ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಎಸ್.ಪಿ.ಜಿ. ತಂಡ ಡಿ.ವೈ.ಎಸ್.ಪಿ. ಹಾಗೂ ಇತರ ಉನ್ನತ ಅಧಿಕಾರಿಗಳು ಪೂರ್ವ ಭಾವಿ ಸಿದ್ಧತೆಗಳನ್ನು ಪರಿಶೀಲಿಸಿದರು.