ಸೋಮವಾರಪೇಟೆ,ಏ.26: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವಕ್ಕೆ ಶಾಸ್ತ್ರೋಕ್ತ ಚಾಲನೆ ನೀಡಲಾಗಿದ್ದು, ಇಂದು ದೇವರ ಗಂಗಾಸ್ನಾನ, ಮುಡಿ ಹರಕೆ ಒಪ್ಪಿಸುವದು, ಬೀದಿ ರಾಜಾಂಗಣದಲ್ಲಿ ಮೆರವಣಿಗೆ, ಸನ್ನಿಧಿ ಪ್ರವೇಶ ಕಾರ್ಯಗಳು ನಡೆದವು.

ತಾ. 27ರಂದು (ಇಂದು) ಬೆಳಿಗ್ಗೆ 6.30ರಿಂದ 9.30ರವರೆಗೆ ಹಣ್ಣುಕಾಯಿ ಮತ್ತು ಮಡೆ ಉತ್ಸವ, ಸುಗ್ಗಿ ಕುಣಿತ ಕಾರ್ಯಕ್ರಮ ನಡೆಯಲಿದೆ.

ಸಬ್ಬಮ್ಮ ದೇವರ ಸುಗ್ಗಿ ಉತ್ಸವದಲ್ಲಿ ಗ್ರಾಮಸ್ಥರು ಶ್ರದ್ಧಾಭಕ್ತಿ ಯಿಂದ ಪಾಲ್ಗೊಂಡಿದ್ದು, ದೇವ ವಿಗ್ರಹವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ತಾ. 27ರಂದು ಗ್ರಾಮದ ಸುಗ್ಗಿ ಕಟ್ಟೆಯಲ್ಲಿ ಸಾಂಪ್ರದಾಯಿಕ ಪೂಜೆ ನಡೆಯಲಿದ್ದು, ತೋಳೂರುಶೆಟ್ಟಳ್ಳಿಯ ಸೂರ್ಯೋದಯ ಯುವಕ ಸಂಘ ಮತ್ತು ಉದ್ಯಮಿ ಹರಪಳ್ಳಿ ರವೀಂದ್ರ ಅವರುಗಳಿಂದ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ಕಾರ್ಯ ನಡೆಯಲಿದೆ. ತಾ. 29ರಂದು ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಸಮಿತಿ ಅಧ್ಯಕ್ಷ ರಾಜ್‍ಗೋಪಾಲ್ ತಿಳಿಸಿದ್ದಾರೆ.