ಮಡಿಕೇರಿ, ಏ. 26: ಕೊಡಗು ವಿದ್ಯಾಲಯ ಆವರಣದಲ್ಲಿ ನಿನ್ನೆ ಸಂಜೆ ಪ್ರಕೃತಿ ಪ್ರಿಯರ ಸಮಾವೇಶ ನಡೆಯಿತು. ಆಕಾಶಕಾಯ ವೀಕ್ಷಣೆ ಮತ್ತು ಅಂಟಾರ್ಟಿಕಾ ಖಂಡದ ಪ್ರವಾಸ ಕಥನ ಕಾರ್ಯಕ್ರಮಕ್ಕೆ ಇದ್ದುದರಿಂದ ನಕ್ಷತ್ರ ವೀಕ್ಷಣೆ ಅಸಾಧ್ಯವಾಯಿತು.

ಸಭಾಂಗಣದಲ್ಲಿ ಡಾ. ನರಸಿಂಹನ್ ನೀಡಿದ ಸುಂದರ ವಿವರಣೆ ಮತ್ತು ಪವರ್ ಪಾಯಿಂಟ್ ದೃಶ್ಯ ನೆರೆದವರ ಆಸಕ್ತಿಯನ್ನು ಸೆರೆಹಿಡಿಯಿತು. ಅಂಟಾರ್ಟಿಕಾದಲ್ಲಿ ಕ್ಷಣಕ್ಷಣಕ್ಕೆ ಬದಲಾಗುವ ವಾತಾವರಣದ ವಿವರಣೆ ಮತ್ತು ಆಕಾಶಕಾಯದ ವಿಸ್ಮಯಗಳು ಸಭಿಕರ ಗಮನ ಸೆಳೆಯಿತು.

ಸ್ವಾಗತ ಆರೋಹಣದ ಅಧ್ಯಕ್ಷ ಸುರೇಶ್ ಆಚಾರ್ಯ ಅವರಿಂದ ನಡೆಯಿತು. ಮಹೇಶ್ ಕುಮಾರ್ ಅವರು ತಮ್ಮ ಸಂಸ್ಥೆಯ ಮೂಲಕ ನಡೆಸುತ್ತಿರುವ ಪರ್ವತಾರೋಹಣ, ಪ್ರಕೃತಿ ಭೇಟಿಗಳ ವಿವರ ನೀಡಿದರು. ಕವಿತಾ ರಾಂ ನಿರೂಪಿಸಿದರು. ಕೃಪಾ ದೇವರಾಜ್ ವಂದನಾರ್ಪಣೆ ಮಾಡಿದರು.